×
Ad

ಚರ್ಚ್‌ಗಳ ಮೂಲಕ ಪ್ರತಿಭಟನೆಗೆ ಕರೆ ನೀಡಿಲ್ಲ: ಕ್ರೈಸ್ತ ಧರ್ಮಪ್ರಾಂತ್ಯದಿಂದ ಸ್ಪಷ್ಟನೆ

Update: 2018-09-29 22:41 IST

ಮಂಗಳೂರು, ಸೆ. 29: ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವತಿಯಿಂದ ಮತ್ತು ಯಾವೂದೇ ಚರ್ಚ್‌ಗಳ ಮೂಲಕ ಪ್ರತಿಭಟನೆಗೆ ಕರೆ ನೀಡಿರುವುದಿಲ್ಲ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.

ಕೊಳ್ನಾಡು ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚರ್ಚ್‌ನ ವತಿಯಿಂದ ಆಗಲಿ ಧರ್ಮಪ್ರಾಂತ್ಯದ ವತಿಯಿಂದ ಯಾವೂದೇ ಪ್ರತಿಭಟನೆಗೆ ಕರೆ ನೀಡಿರುವುದಿಲ್ಲ ಈ ಬಗ್ಗೆ ಯಾವೂದೇ ವದಂತಿಗಳನ್ನು ನಂಬಬೇಡಿ ಎಂದು ಧರ್ಮ ಪ್ರಾಂತ್ಯದ ಪ್ರತಿನಿಧಿಗಳು  ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News