×
Ad

ಮಲ್ಪೆಯಲ್ಲಿ ಪ್ಯಾರಾ ಬೀಚ್ ವಾಲಿಬಾಲ್: ತಮಿಳುನಾಡು ಪ್ರಥಮ, ಕರ್ನಾಟಕ ದ್ವಿತೀಯ

Update: 2018-09-30 20:02 IST

ಮಲ್ಪೆ, ಸೆ. 30: ಭಾರತೀಯ ಪ್ಯಾರಾಲಿಂಪಿಕ್ಸ್ ವಾಲಿವಾಲ್ ಒಕ್ಕೂಟ ಮತ್ತು ರಾಜ್ಯ ಅಂಗವಿಕಲರ ವಾಲಿಬಾಲ್ ಸಂಸ್ಥೆ ಸಹಯೋಗದಲ್ಲಿ ಮಲ್ಪೆ ಬೀಚ್‌ನಲ್ಲಿ ಹಮ್ಮಿಕೊಳ್ಳಲಾದ ಪ್ರಥಮ ಪ್ಯಾರಾ ಬೀಚ್ ವಾಲಿಬಾಲ್ ಸೀನಿಯರ್ ಸ್ಟಾಂಡಿಂಗ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ವಾಲಿಬಾಲ್ ಪಂದ್ಯಾಟದಲ್ಲಿ ತಮಿಳುನಾಡು ತಂಡವು ಪ್ರಶಸ್ತಿ ಗೆದ್ದುಕೊಂಡಿದೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ತಮಿಳು ನಾಡು 21:20, 21:16 ಅಂಕಗಳ ನೇರ ಸೆಟ್‌ಗಳಲ್ಲಿ ಸೋಲಿಸಿತು. ಸೆಮಿ ಫೈನಲ್ ಪಂದ್ಯದಲ್ಲಿ ಆಂಧ್ರಪ್ರದೇಶ ಎ ತಂಡದ ವಿರುದ್ದ ಕರ್ನಾಟಕ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಇನ್ನೊಂದು ಸೆಮಿೈನಲ್ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ತಮಿಳುನಾಡು ತಂಡ ಜಯ ಗಳಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಆಂಧ್ರಪ್ರದೇಶ ತಂಡ ಜಯಭೇರಿ ಸಾಧಿಸಿತು.

ವಿಜೇತ ತಮಿಳುನಾಡು ತಂಡಕ್ಕೆ 20 ಸಾವಿರ ರೂ. ನಗದು ಹಾಗೂ ಶಾಶ್ವತ ಫಲಕ, ರನ್ನರ್ ಅಪ್ ಕರ್ನಾಟಕ ತಂಡಕ್ಕೆ 15 ಸಾವಿರ ರೂ. ನಗದು ಹಾಗೂ ಶಾಶ್ವತ ಫಲಕ ಮತ್ತು ತೃತೀಯ ಸ್ಥಾನ ಪಡೆದ ಆಂದ್ರಪ್ರದೇಶ ತಂಡಕ್ಕೆ 10 ಸಾವಿರ ರೂ. ನಗದು ಹಾಗೂ ಶಾಶ್ವತ ಫಲಕವನ್ನು ನೀಡಿ ಗೌರವಿಸಲಾಯಿತು.

ಪಂದ್ಯಾಟದಲ್ಲಿ ಕರ್ನಾಟಕ, ಗೋವ, ಕೇರಳ, ತೆಲಂಗಾಣ, ತಮಿಳುನಾಡು, ಮಹರಾಷ್ಟ್ರ, ಉತ್ತರಪ್ರದೇಶ, ಉತ್ತರ್‌ಖಂಡ್, ರಾಜಸ್ತಾನ, ಹರ್ಯಾಣ, ಪಶ್ಚಿಮ ಬಂಗಾಲ, ಜಾರ್ಖಂಡ್ ರಾಜ್ಯದ ಒಟ್ಟು 12 ತಂಡಗಳ 150 ಕ್ರೀಡಾ ಪಟುಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಪ್ಯಾರಾ ಒಲಿಂಪಿಕ್ ವಾಲಿಬಾಲ್ ಫೆಡರೇಷನ್ ಆ್ ಇಂಡಿಯಾ ಅಧ್ಯಕ್ಷ ಎಚ್.ಚಂದ್ರಶೇಖರ್ ವಿಜೇತ ತಂಡ ಗಳಿಗೆ ಬಹುಮಾನ ವಿತರಿಸಿದರು. ಟೂರ್ನಿ ಪ್ರಾಯೋಜಕತ್ವ ವಹಿಸಿದ್ದ ಬಾಲಾಜಿ ಮೀಡಿಯಾ ಗ್ರೂಪ್ ಸಿಇಒ ಶಿವಕುಮಾರ್ ಶೆಟ್ಟಿ, ಜಿಲ್ಲಾ ಕ್ರೀಡಾ ಮತ್ತು ಯವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಅಂತಾ ರಾಷ್ಟ್ರೀಯ ರೆಫ್ರಿ ಬಿ.ಕೆ.ರಾವ್, ರಾಷ್ಟ್ರೀಯ ರೆಫ್ರಿಗಳಾದ ರಾಘವೇಂದ್ರ, ಆನಂದ್ ಕಾಂಬ್ಳೆ, ನಾಗೇಶ್, ಆನಂದ್, ರಾಜೀವ್ ಕುಲಕರ್ಣಿ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News