×
Ad

ಮುಂಗಾರು ಬೆಳೆಯ ಸಮೀಕ್ಷೆ ಕಾರ್ಯ ಆರಂಭ: ಉಡುಪಿ ಜಿಲ್ಲಾಧಿಕಾರಿ

Update: 2018-09-30 20:08 IST

ಉಡುಪಿ, ಸೆ.30: ಉಡುಪಿ ಜಿಲ್ಲೆಯಲ್ಲಿ 2018ರ ಮುಂಗಾರು ಬೆಳೆಯ ಸಮೀಕ್ಷೆ ಕಾರ್ಯ ಆರಂಭವಾಗಿದ್ದು ರೈತರು ಅಗತ್ಯ ಮಾಹಿತಿಯನ್ನು ಸಮೀಕ್ಷೆ ನಡೆಸುವ ಸಿಬ್ಬಂದಿಗಳಿಗೆ ನೀಡಬೇಕೆಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಸಮೀಕ್ಷೆ ನಡೆಸುವ ಸಿಬ್ಬಂದಿ ಜಮೀನಿಗೆ ಬರುವ ಪೂರ್ವದಲ್ಲಿ ರೈತರಿಗೆ ಮಾಹಿ ನೀಡಲಿದ್ದಾರೆ. ಅವರಿಗೆ ಸರ್ವೆ ನಂಬರ್, ಬೆಳೆಗಳ ಮಾಹಿತಿ ನೀಡಬೇಕು. ಈ ಸಂದರ್ಭದಲ್ಲಿ ಫೋಟೋವನ್ನು ಕೂಡ ತೆಗೆಯಲಾಗುತ್ತದೆ. ರೈತರು ತಮ್ಮ ಮೊಬೈಲ್ ಸಂಖ್ಯೆ ನೀಡಿ ಸಹಕರಿಸಬೇಕು. ಈ ಕಾರ್ಯವನ್ನು ರೈತ ಫಲಾನುಭವಿ ಯೋಜನೆಗಳಲ್ಲಿ ಬಳಸುವ ಉದ್ದೇಶದಿಂದ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಕಾರ್ಯಕ್ಕಾಗಿ ಮೊಬೈಲ್ ತಂತ್ರಾಂಶದ ಬಗ್ಗೆ ಮಾಹಿತಿ ಇರುವ ಅಂಡ್ರಾಯಿಡ್ ಮೊಬೈಲ್ ಫೋನ್ ಇರುವ ಸ್ಥಳೀಯ ಆಸಕ್ತ ಅಭ್ಯರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಸಕ್ತ ಅಭ್ಯರ್ಥಿಗಳು ತಮ್ಮ ಗ್ರಾಮದ ಗ್ರಾಮಕರಣಿಕ ರನ್ನು ಸಂಪರ್ಕಿಸಬೇಕು. ಈ ಕಾರ್ಯಕ್ಕಾಗಿ ಪ್ರತಿ ಪ್ಲಾಟ್‌ಗೆ 10ರೂ.ನಂತೆ ಸಂಭಾವನೆಯನ್ನು ನಿಗದಿಪಡಿಸಲಾಗಿದೆ. ಸಮೀಕ್ಷೆ ಕಾರ್ಯ ಮುಗಿದ ನಂತರ ದಲ್ಲಿ ನೇರವಾಗಿ ತಮ್ಮ ತಮ್ಮ ಬ್ಯಾಂಕ್ ಖಾತೆಗೆ ಸಂಭಾವನೆಯನ್ನು ನೀಡಲಾಗು ವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News