×
Ad

ಪ್ಲಾಸ್ಟಿಕ್ ಮೊಟ್ಟೆಯೇ ಇಲ್ಲ: ವರ್ತಕರ ಸಂಘ ಸ್ಪಷ್ಟನೆ

Update: 2018-09-30 20:49 IST

ಮಂಗಳೂರು, ಸೆ.30: ಉಳ್ಳಾಲದಲ್ಲಿ ಪ್ಲಾಸ್ಟಿಕ್ ಮೊಟ್ಟೆಯೊಂದು ಪತ್ತೆಯಾಗಿದೆ ಎಂದು ಶನಿವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗೆ ಪ್ರತಿಕ್ರಿಯೆ ನೀಡಿರುವ ದ.ಕ. ಜಿಲ್ಲಾ ರಖಂ ಮೊಟ್ಟೆ ವರ್ತಕರ ಸಂಘ (ರಿ) ‘ಪ್ಲಾಸ್ಟಿಕ್ ಮೊಟ್ಟೆ ಎಂಬುದೇ ಇಲ್ಲ. ಅವಧಿ ಮೀರಿದ ಕೆಲವು ಮೊಟ್ಟೆಗಳು ರಬ್ಬರ್ ಥರ ಕಾಣಿಸುತ್ತಿದ್ದು, ವೈಜ್ಞಾನಿಕವಾಗಿಯೂ ಪ್ಲಾಸ್ಟಿಕ್ ಮೊಟ್ಟೆ ತಯಾರಿಯಾದ ಬಗ್ಗೆ ಕುರುಹು ಇಲ್ಲ’ ಎಂದಿದೆ.

 ಕೆಲವು ಅಂಗಡಿ, ಸೂಪರ್ ಮಾರ್ಕೆಟ್‌ನವರು ಕಡಿಮೆ ದರದಲ್ಲಿ ಮೊಟ್ಟೆ ಸಿಗುತ್ತದೆ ಎಂದು ಭಾವಿಸಿ ಮೊಟ್ಟೆಗಳನ್ನು ಖರೀದಿಸುತ್ತಾರೆ. ಇಂತಹವರು ಅವಧಿ ಮೀರಿದ ಮೊಟ್ಟೆಯನ್ನೂ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಇಂತಹ ವದಂತಿಗಳಿಗೆ ಕಾರಣವಾಗಲಿದೆ. ಮಂಗಳೂರು, ಪುತ್ತೂರು, ಉಡುಪಿಯ ಕೆಲವು ಕಡೆ ಕಡಿಮೆ ದರದಲ್ಲಿ ಮೊಟ್ಟೆ ಮಾರಾಟ ಪ್ರಕ್ರಿಯೆ ಬಿರುಸಾಗಿಯೇ ಇದೆ. ಬಹುತೇಕ ಈ ಮೊಟ್ಟೆಗಳು ಅವಧಿ ಮೀರಿದ್ದಾಗಿರುತ್ತದೆ. ಇದರಿಂದ ಒಟ್ಟು ಮೊಟ್ಟೆ ವರ್ತಕರ ಮೇಲೆ ಗ್ರಾಹಕರು ಸಂಶಯ ಪಡುವ ಸಾಧ್ಯತೆ ಇದೆ. ಹಾಗಾಗಿ ಅಂಗಡಿದಾರರು ಅಧಿಕೃತ ಮೊಟ್ಟೆ ವ್ಯಾಪಾರಿಗಳಿಂದಲೇ ಮೊಟ್ಟೆ ಖರೀದಿಸಿ ಅದನ್ನು ಗ್ರಾಹಕರಿಗೆ ನೀಡಬೇಕು. ಅನಧಿಕೃತ ವ್ಯಾಪಾರಿಗಳಿಂದ ಖರೀದಿಸಿ ಮೋಸ ಹೋಗುವ ಬದಲು ಅಧಿಕೃತ ಮಾರಾಟಗಾರರಿಂದ ಖರೀದಿಸಬಹುದು ಎಂದು ಸಂಘದ ಅಧ್ಯಕ್ಷ ಆಲ್ವಿನ್ ಪಿಂಟೋ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News