ಮಂಗಳೂರು: ರಾಜ್ಯ ಮೀನುಗಾರಿಕಾ ನಿರ್ದೇಶಕರಿಗೆ ಸನ್ಮಾನ
ಮಂಗಳೂರು, ಸೆ. 30: ಸೇವಾ ನಿವೃತ್ತಿ ಹೊಂದಿದ ರಾಜ್ಯ ಮೀನುಗಾರಿಕಾ ನಿರ್ದೇಶಕ ಎಚ್.ಎಸ್.ವೀರಪ್ಪಗೌಡ ಅವರನ್ನು ಮಂಗಳೂರು ಕರಾವಳಿ ಅಲ್ಪ ಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ಬೆಂಗಳೂರಿನಲ್ಲಿರುವ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ಸನ್ಮಾನಿಸಲಾಯಿತು.
ಸಂಘದ ಸಿಇಒ ಅಬ್ದುಲ್ ಲತೀಫ್ ಮಾತನಾಡಿ ವೀರಪ್ಪಗೌಡ ತಮ್ಮ ಅವಧಿಯಲ್ಲಿ ಸಣ್ಣ ಸಂಘಗಳಿಗೂ ಸಹಕಾರ ನೀಡುವ ಮೂಲಕ ಸಂಘಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.
ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ರಾಮಕೃಷ್ಣ, ರಾಮಾಚಾರ್ಯ, ಉಪನಿರ್ದೇಶಕ ದಿನೇಶ್ ಕುಮಾರ್, ಮಂಗಳೂರು ಕೆಎಫ್‌ಡಿಸಿ ವ್ಯವಸ್ಥಾಪನಾ ನಿರ್ದೇಶಕ ಎಂ.ಎಲ್. ದೊಡ್ಡಮನಿ, ಸಿಬ್ಬಂದಿ ಕಿರಣ್ ಕುಮಾರ್, ಸಂಘದ ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್, ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಟಿ.ಎಚ್.ಹಮೀದ್, ಎಂ.ಎ.ಗಫೂರ್, ಯು.ಟಿ.ಅಹ್ಮದ್ ಶರೀಫ್, ಪಿ.ಪಿ.ಮೊಯಿನ್ ಪಾಷ, ಮುಹಮ್ಮದ್ ಅಶ್ರಫ್, ಬಿ.ಇಬ್ರಾಹೀಂ ಮುಹಮ್ಮದ್ ಮುಸ್ತಫಾ ಮಲಾರ್ ಮತ್ತಿತರರು ಉಪಸ್ಥಿತರಿದ್ದರು.