×
Ad

ಎಸ್ಸೆಸ್ಸೆಫ್ ಗುರುವಾಯನಕೆರೆ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ

Update: 2018-09-30 21:04 IST

ಬೆಳ್ತಂಗಡಿ,ಸೆ.30: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಹಾಗೂ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವ್ಯಾಪ್ತಿಯ ಗುರುವಾಯನಕೆರೆ ಸೆಕ್ಟರ್ ವತಿಯಿಂದ ಯೆನಪೋಯ ಆಸ್ಪತ್ರೆ, ದೇರಳಕಟ್ಟೆ ಇದರ ಸಹಯೋಗದೊಂದಿಗೆ 'ಬೃಹತ್ ರಕ್ತದಾನ ಶಿಬಿರವು' ಇಂದು ಮದ್ದಡ್ಕ ಜಂಕ್ಷನ್ ನಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷ ಕರೀಂ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವು ನಡೆಯಿತು. ಸಯ್ಯಿದ್ ಬದ್ರುದ್ದೀನ್ ತಂಙಳ್ ಪಿಲ್ಯರವರು ಪ್ರಾರ್ಥನೆ ನೆರವೇರಿಸಿದರು. ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಹಾಗೂ ಬ್ಲಡ್ ಕ್ಯಾಂಪ್ ಉಸ್ತುವಾರಿ ರಶೀದ್ ಮಡಂತ್ಯಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸ್ಥಳೀಯ ಮುದರ್ರಿಸ್ ರಫೀಕ್ ಅಹ್ಸನಿ ಮದ್ದಡ್ಕ, ಸೆಕ್ಟರ್ ನಾಯಕ ನಝೀರ್ ಅಹ್ಸನಿ, ಡಿವಿಷನ್ ನಾಯಕ ಇಕ್ಬಾಲ್ ಮಾಚಾರ್, ಯೆನಪೋಯ ಆಸ್ಪತ್ರೆಯ ಡಾ.ಶಶಿಧರ್ ಹಾಗೂ ಸ್ಥಳೀಯ ಉಸ್ತಾದರು, ಸೆಕ್ಟರ್ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸೆಕ್ಟರ್ ಪ್ರ.ಕಾರ್ಯದರ್ಶೀ ಝೈನುದ್ದೀನ್ ಅಳದಂಗಡಿ ಸ್ವಾಗತಿಸಿ, ಸೆಕ್ಟರ್ ನಾಯಕ ಸಿದ್ದೀಕ್ ಜಾರಿಗೆಬೈಲು ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News