×
Ad

ಬೈಲೂರು ಅನಂತಪದ್ಮನಾಭ ತಂತ್ರೀ ಸಂಸ್ಮರಣ ಪ್ರಶಸ್ತಿ ಪ್ರದಾನ

Update: 2018-09-30 21:07 IST

ಉಡುಪಿ, ಸೆ.30: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಶ್ರೀಮನ್ಮಧ್ವ ಸಿದ್ಧಾಂತ ಪ್ರಭೋಧಕ ಸಂಸ್ಕೃತ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಬೈಲೂರು ಅನಂತಪದ್ಮನಾಭ ತಂತ್ರೀ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು.

ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ವೈಜಯಂತೀ ಪಂಚಾಂಗಕರ್ತ ಯರ್ಮುಂಜ ಶಂಕರ ಜೋಯಿಸರಿಗೆ ಪ್ರಶಸ್ತಿ ಪ್ರದಾನ ಮಾಡಿ ದರು. ಜ್ಯೋತಿಷ್ಯಶಾಸ್ತ್ರ ಅಂದರೆ ಅಗ್ನಿ ಎಂದರ್ಥ. ಅಗ್ನಿಯಂತೆ ಜ್ಯೋತಿಷ್ಯವು ಎಲ್ಲರಿಗೂ ಅವಶ್ಯವಾಗಿದೆ. ಯರ್ಮುಂಜ ಜೋಯಿಸರ ಪರಂಪರೆಯು ಸಮಾಜಕ್ಕೆ ಮಾರ್ಗದರ್ಶನ ಮಡುವುದರೊಂದಿಗೆ ದೃಕ್ ಸಿದ್ಧಾಂತ ಪ್ರಕಾರ ಪಂಚಾಂಗ ಆರಂಭ ಮಾಡಿದ ಕೀರ್ತಿ ಇವರ ಪರಂಪರೆಗೆ ಸಲ್ಲುತ್ತದೆ ಎಂದು ಸ್ವಾಮೀಜಿ ಹೇಳಿದರು.

ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವ ಚನ ನೀಡಿದರು. ನಿವೃತ್ತ ಪಾಚಾರ್ಯ ಡಾ.ಪಾದೆಕಲ್ಲು ವಿಷ್ಣು ಭಟ್ ಅಭಿ ನಂದನಾ ಭಾಷಣ ಮಾಡಿದರು. ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜಿನ ಪ್ರಾಂಶು ಪಾಲ ಡಾ.ಲಕ್ಷ್ಮೀನಾರಾಯಣ ಭಟ್, ವಿ.ಬೈಲೂರು ನಾರಾಯಣ ತಂತ್ರಿ, ಎಸ್‌ಎಂಎಸ್‌ಪಿ ಸಭಾದ ಕಾರ್ಯದರ್ಶಿ ಯು.ರತ್ನಕುಮಾರ್, ಕೋಶಾಧಿಕಾರಿ ಪದ್ಮನಾಭ ಭಟ್ ಉಪಸ್ಥಿತರಿದ್ದರು.

ಸಂಸ್ಕೃತ ಮಹಾಪಾಠ ಶಾಲೆಯ ಜ್ಯೋತಿಷ್ಯ ಉಪನ್ಯಾಸಕ ವಿದ್ವಾನ್ ಶಿವ ಪ್ರಸಾದ ತಂತ್ರಿ ಸ್ವಾಗತಿಸಿದರು. ಉಪನ್ಯಾಸಕ ವಿ.ಮಹೇಂದ್ರ ಸೋಮಯಾಜಿ ವಂದಿಸಿದರು. ಉಪನ್ಯಾಸಕ ವಿ.ರಾಧಾಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿ ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News