ಗಾಂಜಾ ಸೇವನೆ ಆರೋಪ: ಮೂವರು ವಶಕ್ಕೆ
Update: 2018-09-30 21:11 IST
ಪಡುಬಿದ್ರಿ, ಸೆ.30: ಎಲ್ಲೂರು ಗ್ರಾಮದ ಮುದರಂಗಡಿ ಪೇಟೆಯಲ್ಲಿ ಸೆ.28 ರಂದು ಸಂಜೆ ವೇಳೆ ಗಾಂಜಾ ಸೇವಿಸಿದ್ದ ಮೂವರನ್ನು ಪಡುಬಿದ್ರೆ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಮುದರಂಗಡಿಯ ಆರೀಫ್ ಸಾಹೇಬ್ (21), ಪಣಿಯೂರಿನ ಅಕ್ಬರ್ (24), ಎಲ್ಲೂರಿನ ಮುನಾಫ್(21) ಎಂಬವರನ್ನು ವಶಕ್ಕೆ ಪಡೆದ ಪೊಲೀಸರು, ಮಣಿಪಾಲ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ಎದುರು ಹಾಜರು ಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದರು. ಇದರಿಂದ ಅವರು ಗಾಂಜಾ ಸೇವಿಸಿರುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.