×
Ad

ಉಡುಪಿ: ಬ್ಲೇಡ್‌ನಿಂದ ಇರಿದು ತಂಡದಿಂದ ಸುಲಿಗೆಗೆ ಯತ್ನ

Update: 2018-09-30 21:20 IST

ಉಡುಪಿ, ಸೆ.30: ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೆ.29 ರಂದು ನಸುಕಿನ ವೇಳೆ ಮಲಗಿಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಮೂವರ ತಂಡ ಬ್ಲೇಡ್‌ನಿಂದ ಇರಿದು ಸುಲಿಗೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.

ಹಾವೇರಿ ಜಿಲ್ಲೆಯ ನವೀನ್ ಉಳ್ಳಗಡ್ಡಿ (21) ಎಂಬವರು ಬಸ್ ನಿಲ್ದಾಣ ದಲ್ಲಿ ಮಲಗಿದ್ದು, ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ಮೂವರು ವ್ಯಕ್ತಿಗಳು ಹಣ ಕೊಡಲು ಒತ್ತಾಯಿಸಿ ಸುಲಿಗೆ ಮಾಡಲು ಪ್ರಯತ್ನಸಿದರು. ಈ ಸಂದರ್ಭ ನವೀನ್ ಬೊಬ್ಬೆ ಹಾಕಿದಾಗ ದುಷ್ಕರ್ಮಿಗಳು ನವೀನ್‌ರ ಎದೆ, ಹೊಟ್ಟೆಯ ಬಳಿ ಬ್ಲೆಡಿನಿಂದ ಇರಿದು ಪರಾರಿಯಾದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News