ಮಲ್ಪೆ ಬೋಟು ಗೋವಾದಲ್ಲಿ ಬಂಡೆಗೆ ಢಿಕ್ಕಿ
Update: 2018-09-30 22:56 IST
ಮಲ್ಪೆ, ಸೆ.30: ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟೊಂದು ಗೋವಾ ರಾಜ್ಯದ ವಾಸ್ಕೊ ಎಂಬಲ್ಲಿ ಇಂದು ಬೆಳಗ್ಗೆ ಬಂಡೆ ಢಿಕ್ಕಿ ಹೊಡೆದು ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಮಲ್ಪೆಯ ಗಂಗಾಧರ ಸಾಲ್ಯಾನ್ ಎಂಬವರ ಗಿಲ್‌ನೆಟ್ ಬೋಟಿನಲ್ಲಿ 9 ಮಂದಿ ಮೀನುಗಾರರು ಸೆ.25ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆ ಹೊರಟಿದ್ದರು. ವಾಸ್ಕೊ ಎಂಬಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿನಡಿ ಯಲ್ಲಿದ್ದ ಬಂಡೆ ಬೋಟಿನಡಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಇಂಜಿನ್‌ಗೆ ಹಾನಿ ಉಂಟಾಗಿ ಬೋಟು ಸಮುದ್ರ ಮಧ್ಯೆ ಕೆಟ್ಟು ನಿಂತಿದೆ. ಅದರಲ್ಲಿದ್ದ 9 ಮಂದಿ ಮೀನುಗಾರರನ್ನು ಇತರ ಬೋಟಿನವರು ರಕ್ಷಿಸಿದ್ದು, ಅವರೆಲ್ಲ ಸುರಕ್ಷಿತವಾಗಿ ಮಲ್ಪೆಗೆ ಆಗವಿುಸಿದ್ದಾರೆ ಎಂದು ಮೂಲಗಳು ತಿಳಿಸಿವೆ.