×
Ad

ತೊಕ್ಕೊಟ್ಟು: ಬೈಕ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತಕ್ಕೆ ವ್ಯಕ್ತಿ ಬಲಿ

Update: 2018-09-30 23:42 IST

ಉಳ್ಳಾಲ, ಸೆ. 30: ಬೈಕ್ ಚಲಾಯಿಸುತ್ತಿದ್ದ ವೇಳೆ ವ್ಯಕ್ತಿಯೋರ್ವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ  ಘಟನೆ ಕೊಲ್ಯದಲ್ಲಿ ರವಿವಾರ ಸಂಜೆ ಸಂಭವಿಸಿದೆ.

ಉಳ್ಳಾಲ ಬೈಲು ನಿವಾಸಿ ದೇವದಾಸ್ ಶ್ರೀಯಾನ್ (58) ಹೃದಯಾಘಾತಕ್ಕೆ ಬಲಿಯಾದವರು. ಇಂದು ಸಂಜೆ ಮನೆಯಿಂದ ಕೋಟೆಕಾರಿಗೆ ತೆರಳಿ ಹಿಂದಿರುಗುವಾಗ ಘಟನೆ ನಡೆದಿದೆ. ತಕ್ಷಣ ದೇವದಾಸ್ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆ ದಾಖಲಿಸಲಾಯಿತಾದರೂ ದಾರಿ ಮಧ್ಯದಲ್ಲೇ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

ಶ್ರೀಯಾನ್ ಅವರು ಕೋಟೆಕಾರು ಪಟ್ಟಣ ಪಂಚಾಯತ್ ನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News