×
Ad

ಅ. 4-5ರಂದು ಬೀಕನ್ಸ್ ಮೀಡಿಯಾ ಫೆಸ್ಟ್

Update: 2018-10-01 19:57 IST

ಮಂಗಳೂರು, ಅ.1: ದೇರಳಕಟ್ಟೆ ನಿಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ತನ್ನ 5ನೆ ಸಾಲಿನ 2ನೆ ಆವೃತ್ತಿಯ ‘ಬೀಕನ್ಸ್’ ಮೀಡಿಯಾ ಫೆಸ್ಟನ್ನು ಅಕ್ಟೋಬರ್ 4 ಮತ್ತು 5ರಂದು ಆಚರಿಸಲಿದೆ ಎಂದು ಸಹಾಯಕ ಪ್ರಾಧ್ಯಾಪಕಿ ವಿಲ್ಮಾ ಸೆರಾವೊ ತಿಳಿಸಿರು.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಸ್ಪರ್ಧಿಗಳು ವಿಭಿನ್ನ ವಿಭಾಗಗಳಲ್ಲಿ ಭಾಗವಹಿಸಿ ಮಾಧ್ಯಮದ ವಿದ್ಯಾರ್ಥಿ ಚಟುವಟಿಕೆಗಳ ಒಳನೋಟ ಪಡೆಯಲಿದ್ದಾರೆ ಎಂದರು.

ಶಾರ್ಟ್ ಫಿಲ್ಮ್ ಮೇಕಿಂಗ್, ಫೇಸ್ ಪೇಯ್ಟಿಂಗ್, ಎಸ್ಕೇಪ್ ರೂಂ., ಪಾಟ್ ಫೌರಿ, ಥೀಮ್ ಡ್ಯಾನ್ಸ್, ಕ್ರಿಯೇಟಿವ್ ರೈಟಿಂಗ್, ಆರ್.ಜೆ. ಹಂಟ್, ಪ್ರೊಡಕ್ಟ್ ಲಾಂಚ್, ಫೊಟೊಗ್ರಫಿ, ಮೋಕ್ ಪ್ರೆಸ್, ಕ್ವಿಝ್, ಕ್ರೈಸಿಸ್ ಮ್ಯಾನೇಜ್‌ಮೆಂಟ್, ವೀಡಿಯೋ ಪಿಎಸ್‌ಎ ಹಾಗೂ ವೀಡಿಯೋ ಬುಲೆಟಿನ್ ಸೇರಿದಂತೆ 16 ಸ್ಪರ್ಧೆಗಳು ನಡೆಯಲಿವೆ. 2017ರಲ್ಲಿ ನಡೆದ ಬೀಕನ್ಸ್ ಸ್ಪರ್ಧೆಯಲ್ಲಿ 25 ಕಾಲೇಜುಗಳ ಒಟ್ಟು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಅವರು ಹೇಳಿರು.

ಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಲೈಕಾ, ರುತಿಕಾ, ಹರ್ಷಾ, ರಾಹುಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News