×
Ad

ಬ್ಯಾರೀಸ್ ಕಾಲೇಜು ಕೋಡಿ: ರಕ್ಷಕ-ಶಿಕ್ಷಕ ಸಭೆ

Update: 2018-10-01 20:18 IST

ಕುಂದಾಪುರ, ಅ. 1: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ, ಕುಂದಾಪುರ ಇದರ 2018-19 ರ ರಕ್ಷಕ-ಶಿಕ್ಷಕ ಸಭೆ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷ ಡಾ.ಶಮೀರ್ ಮಾತನಾಡಿ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃಧ್ಧಿಗೆ ಪೋಷಕ-ಶಿಕ್ಷಕರ ಪಾತ್ರ ಮಹತ್ತರ ಎಂದು ಹೇಳಿದರು. ನೂತನ ಅಧ್ಯಕ್ಷರಾಗಿ ಶಂಕರ ಬಂಗೇರ, ಸಹಕಾರ್ಯದರ್ಶಿ ಶ್ರೀಮತಿ ಶಫಿಯಾ, ಸದಸ್ಯರುಗಳಾದ ಅಹಮದ್, ಲಕ್ಷ್ಮಿ, ಆಸಿಫ್, ಸುಮಿತ್ರ, ಜಲಜ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಮಾಲತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣಪತಿ ಅನುಧಾನಿತ ಪ್ರೌಢಶಾಲೆಯ ಸಂಸ್ಕೃತ ಉಪನ್ಯಾಸಕರಾದ ಡಾ. ರಾಘವೇಂದ್ರ ರಾವ್ ಪೋಷಕರನ್ನುದ್ದೇಶಿಸಿ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಉಪನ್ಯಾಸಕರಾದ ಸಂದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News