ಮಲ್ಪೆ ಸಮುದ್ರದಲ್ಲಿ ಮುಳುಗಿ ಅಪರಿಚಿತ ವ್ಯಕ್ತಿ ಮೃತ್ಯು
Update: 2018-10-01 21:56 IST
ಮಲ್ಪೆ, ಅ.1: ಮಲ್ಪೆ ಬೀಚ್‌ನ ಸಮುದ್ರದಲ್ಲಿ ಈಜುತ್ತಿದ್ದ 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ನಡೆದಿದೆ.
ಬಟ್ಟೆ ಹಾಗೂ ಮೊಬೈಲ್‌ನ್ನು ಬೀಚ್‌ನಲ್ಲಿ ಇಟ್ಟು ಸಮುದ್ರದಲ್ಲಿ ಈಜುತ್ತಿದ್ದ ಈ ವ್ಯಕ್ತಿ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರೆನ್ನಲಾಗಿದೆ. ಕೂಡಲೇ ತಟ ರಕ್ಷಣಾ ಪಡೆಯವರು ನೀರಿಗೆ ಹಾರಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಮೃತ ವ್ಯಕ್ತಿ ಒಬ್ಬರೇ ಬೀಚ್‌ಗೆ ಬಂದಿದ್ದರೆನ್ನಲಾಗಿದೆ. ಮೃತದೇಹವನ್ನು ಉಡುಪಿ ಶವಗಾರದಲ್ಲಿ ಇರಿಸಲಾಗಿದೆ. ಪತ್ತೆಯಾಗಿರುವ ಮೊಬೈಲ್ ಮೂಲಕ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.