×
Ad

ಕೋಡಿ: ವಿದ್ಯಾರ್ಥಿಯ ಮೃತದೇಹ ಪತ್ತೆ

Update: 2018-10-01 21:57 IST

ಕುಂದಾಪುರ, ಅ.1: ಕೋಡಿ ಬೀಚ್‌ನಲ್ಲಿ ರವಿವಾರ ಸಮುದ್ರ ಪಾಲಾಗಿದ್ದ ವಿದ್ಯಾರ್ಥಿ ಮನೋಜ್ ಪೂಜಾರಿ(18) ಮೃತದೇಹವು ಇಂದು ಸಂಜೆ ಕೋಡಿ - ಗಂಗೊಳಿ್ಳ ಅಳಿವೆ ಪ್ರದೇಶದಲ್ಲಿ ಪತ್ತೆಯಾಗಿದೆ.

ಸೆ.30ರ ಬೆಳಗ್ಗೆ 11:30ರ ಸುಮಾರಿಗೆ ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಮನೋಜ್ ಪೂಜಾರಿಗಾಗಿ ಅಗ್ನಿ ಶಾಮಕ ದಳದ, ಸ್ಥಳೀಯ ಲೈಪ್‌ಗಾರ್ಡ್, ಪೊಲೀಸರು, ಸ್ಥಳೀಯ ನಾಗರಿಕರು ತಡರಾತ್ರಿವರೆಗೆ ತೀವ್ರ ಹುಡುಕಾಟ ನಡೆಸಿದ್ದರು. ಸೋಮವಾರ ಬೆಳಗ್ಗಿನಿಂದ ಮತ್ತೆ ಹುಡುಕಾಟ ಮುಂದುವರೆಸಲಾಗಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕುಂದಾಪುರ ಸರಕಾರಿ ಆಸ್ಪತ್ರೆ ಯಲ್ಲಿ ನಡೆಸಿ, ಕುಟುಂಬದವರಿಗೆ ಹಸ್ತಾಂತರಿ ಸಲಾಯಿತು.

ಈ ಬಗ್ಗೆ ಕುಂದಾ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News