ಕೆಎಸ್‌ಆರ್‌ಟಿಸಿ ಚಾಲಕನ ಕೊಲೆಯತ್ನ: ದೂರು
Update: 2018-10-01 22:02 IST
ಕೋಟ, ಅ.1: ಐರೋಡಿ ಗ್ರಾಮದ ಸಾಸ್ತಾನ ಎಂಬಲ್ಲಿ ಸೆ.30ರಂದು ಸಂಜೆ ವೇಳೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕೊಲೆಗೆ ಯತ್ನಿಸಿ ರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೆ ಒಳಗಾಗಿರುವ ಕೆಎಸ್‌ಆರ್‌ಟಿಸಿ ಕುಂದಾಪುರ ಘಟಕದ ಬಸ್ಸಿನ ಚಾಲಕ, ಅಂಕೋಲ ನಿವಾಸಿ ಅಮರನಾಥ(40) ಎಂಬವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಬೆಂಗಳೂರಿನಿಂದ ಕುಂದಾ ಪುರಕ್ಕೆ ಬರುತ್ತಿದ್ದ ಬಸ್ಸನ್ನು ಸಾಸ್ತಾನ ಬಳಿ ಹಿಂದಿನಿಂದ ಕಾರಿನಲ್ಲಿ ಬಂದ ಮೂವರು ಅಡ್ಡಗಟ್ಟಿ ನಿಲ್ಲಿಸಿದ್ದು, ಬಳಿಕ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು ರಾಡ್‌ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆನ್ನಲಾಗಿದೆ.
ದುಷ್ಕರ್ಮಿಗಳು ಸರಕಾರಿ ಕರ್ತವ್ಯದಲ್ಲಿದ್ದ ಅಮರನಾಥನನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.