×
Ad

​ಡಿಸಿಪಿ ಹನುಮಂತರಾಯ ಮಂಗಳೂರಿನಲ್ಲೇ ಮುಂದುವರಿಕೆ

Update: 2018-10-01 22:47 IST

ಮಂಗಳೂರು, ಆ.1: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪಪೊಲೀಸ್ ಆಯುಕ್ತರಾಗಿದ್ದ ಹನುಮಂತರಾಯ ಅವರನ್ನು ಯಾದಗಿರಿ ಎಸ್ಪಿಯಾಗಿ ನಿಯುಕ್ತಿಗೊಳಿಸಿದ್ದ ಆದೇಶವನ್ನು ರದ್ದುಗೊಳಿಸಿದ ಸರಕಾರ ನಗರದಲ್ಲೇ ಡಿಸಿಪಿಯಾಗಿ ಮುಂದುವರಿಕೆಗೆ ಆದೇಶ ಮಾಡಿದೆ.

ಕಳೆದ ಒಂದು ವರ್ಷಗಳಿಂದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಇತ್ತೀಚೆಗೆ ವಿಶೇಷ ತರಬೇತಿಗಾಗಿ ಹೈದರಾಬಾದ್‌ಗೆ ತೆರಳಿದ್ದು, ಅ.6ರಂದು ಮರಳಿ ನಗರಕ್ಕೆ ಆಗಮಿಸಿ ಡಿಸಿಪಿಯಾಗಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News