ಇಸ್ರೇಲ್‌ನ ಯಹೂದಿ ರಾಷ್ಟ್ರ ಕಾನೂನು ವಿರೋಧಿಸಿ ಪಶ್ಚಿಮ ದಂಡೆ ಬಂದ್

Update: 2018-10-01 17:20 GMT

ರಮಲ್ಲಾ (ಫೆಲೆಸ್ತೀನ್), ಅ. 1: ಇಸ್ರೇಲನ್ನು ಯಹೂದಿ ರಾಷ್ಟ್ರ ಎಂಬುದಾಗಿ ಘೋಷಿಸುವ ವಿವಾದಾತ್ಮಕ ಕಾನೂನಿಗೆ ಸಂಬಂಧಿಸಿ, ಇಸ್ರೇಲ್‌ನಲ್ಲಿರುವ ಅರಬ್ ನಾಗರಿಕರಿಗೆ ಬೆಂಬಲ ಸೂಚಿಸಿ ಫೆಲೆಸ್ತೀನಿಯರು ಸೋಮವಾರ ಪಶ್ಚಿಮ ದಂಡೆಯಲ್ಲಿ ಬಂದ್ ಆಚರಿಸಿದರು.

ರಮಲ್ಲಾ ಮತ್ತು ಪಶ್ಚಿಮ ದಂಡೆಯ ಇತರ ನಗರಗಳ ರಸ್ತೆಗಳು ಒಟ್ಟಾರೆಯಾಗಿ ಖಾಲಿಯಾಗಿದ್ದವು. ಶಾಲೆಗಳು, ವಿಶ್ವವಿದ್ಯಾನಿಲಯಗಳು, ಸರಕಾರಿ ಕಚೇರಿಗಳು ಮತ್ತು ಖಾಸಗಿ ಉದ್ಯಮಗಳು ಮುಚ್ಚಿದ್ದವು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಬಂದ್ ಆಗಿತ್ತು.

ಕಳೆದ ತಿಂಗಳು ಅಂಗೀಕರಿಸಲಾದ ಇಸ್ರೇಲ್‌ನ ಯಹೂದಿ ರಾಷ್ಟ್ರ ಕಾನೂನು ಇಸ್ರೇಲ್‌ಲನ ಯಹೂದಿಯೇತರ ನಾಗರಿಕರನ್ನು ಕಡೆಗಣಿಸುತ್ತದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News