ನೊಬೆಲ್ ಸಾಹಿತ್ಯ ಪ್ರಶಸ್ತಿ ಹಗರಣದ ವ್ಯಕ್ತಿಗೆ ಜೈಲು

Update: 2018-10-01 17:27 GMT

ಕೋಪನ್‌ಹೇಗನ್ (ಡೆನ್ಮಾರ್ಕ್), ಅ. 1: ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ನೀಡುವ ಸ್ವೀಡಿಶ್ ಅಕಾಡೆಮಿಯ ಪ್ರತಿಷ್ಠೆಯನ್ನು ಕೆಡಿಸಿದ ಲೈಂಗಿಕ ಹಗರಣದ ಆರೋಪಿಯ ವಿರುದ್ಧದ ಅತ್ಯಾಚಾರ ಪ್ರಕರಣವು ಸಾಬೀತಾಗಿದ್ದು, 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

2011ರಲ್ಲಿ ಮಾಡಿದ ಅತ್ಯಾಚಾರಕ್ಕಾಗಿ ಸ್ವೀಡನ್‌ನ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖ ಜೀನ್ ಕ್ಲಾಡ್ ಅರ್ನಾಲ್ಟ್ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.

ಸೋಮವಾರ ಸ್ಟಾಕ್‌ಹೋಮ್ ಜಿಲ್ಲಾ ನ್ಯಾಯಾಲಯವೊಂದು ತೀರ್ಪು ಘೋಷಿಸಿತು.

ದೋಷಿಯು ಸ್ವೀಡಿಶ್ ಅಕಾಡೆಮಿಯ ಸದಸ್ಯೆಯೊಬ್ಬರ ಗಂಡನಾಗಿದ್ದಾನೆ.

ಈ ವರ್ಷ ನೊಬೆಲ್ ಸಾಹಿತ್ಯ ಪ್ರಶಸ್ತಿ ನೀಡಲಾಗುವುದಿಲ್ಲ ಎಂಬುದಾಗಿ ಅಕಾಡೆಮಿ ಈಗಾಗಲೇ ಪ್ರಕಟಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News