×
Ad

“ಮುಶರ್ರಫ್‌ಗೆ ಹೊಸ ಕಾಯಿಲೆ; ವಿಚಾರಣೆಗೆ ಬರಲು ಸಾಧ್ಯವಿಲ್ಲ”

Update: 2018-10-01 22:59 IST

ಇಸ್ಲಾಮಾಬಾದ್, ಅ. 1: ಯಾವುದೆಂದು ಗುರುತಿಸಲಾಗದ ಹೊಸ ಕಾಯಿಲೆಯಿಂದಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್ ‘ದಿನೇ ದಿನೇ ನಿತ್ರಾಣರಾಗುತ್ತಿದ್ದಾರೆ’ ಹಾಗೂ ಅವರ ವಿರುದ್ಧದ ದೇಶದ್ರೋಹ ಪ್ರಕರಣವನ್ನು ಎದುರಿಸಲು ಪಾಕಿಸ್ತಾನಕ್ಕೆ ಅವರಿಗೆ ವಾಪಸಾಗಲು ಸಾಧ್ಯವಿಲ್ಲ ಎಂದು ಅವರ ಪಕ್ಷ ‘ಆಲ್ ಪಾಕಿಸ್ತಾನ್ ಮುಸ್ಲಿಮ್ ಲೀಗ್’ನ ಮಾಜಿ ಅಧ್ಯಕ್ಷ ಮುಹಮ್ಮದ್ ಅಮ್ಜದ್ ಹೇಳಿದ್ದಾರೆ.

ಸಂವಿಧಾನವನ್ನು ಅಮಾನತಿನಲ್ಲಿಟ್ಟಿರುವುದಕ್ಕಾಗಿ 75 ವರ್ಷದ ಮುಶರ್ರಫ್ ವಿರುದ್ಧ 2007ರಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿದ್ದು, ಅದರ ವಿಚಾರಣೆ ನಡೆಯುತ್ತಿದೆ.

ಹೊಸ ರೋಗದಿಂದಾಗಿ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಲಂಡನ್‌ಗೆ ಹೋಗಬೇಕಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News