×
Ad

ಸಂತ ಅಲೋಶಿಯ ಶಾಲೆಯಲ್ಲಿ ರಾಷ್ಟ್ರಪಿತನಿಗೆ ನಮನ

Update: 2018-10-02 18:10 IST

ಮಂಗಳೂರು, ಅ.2: ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ನಮನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ ಭಾಗವಹಿಸಿ ರಾಷ್ಟ್ರದ ಮಹಾನ್ ನಾಯಕರಾಗಿರುವ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜೀವನವನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂ.ರವಿ ಸಂತೋಷ್ ಕಾಮತ್ ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಫಿಲೋಮಿನಾ ಲೂವಿಸ್,  ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ರೇಖಾ ಫೆರ್ನಾಂಡಿಸ್ ಹಾಗೂ ಶಾಲಾ ನಾಯಕ , ಉಪನಾಯಕಿ  ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಿಂದ ವರ್ಣರಂಜಿತ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ತಮ್ಮ ತರಗತಿ, ಶಾಲೆ, ಶಾಲಾ ವಠಾರವನ್ನು ಸ್ವಚ್ಛ ಗೊಳಿಸಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೂ  ಸಿಹಿತಿಂಡಿಯನ್ನು  ಹಂಚಲಾಯಿತು.  ರಾಷ್ಟ್ರಗೀತೆಯೊಂದಿಗೆ  ಕಾರ್ಯಕ್ರಮ ಮುಕ್ತಾಯಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News