×
Ad

ಮಂಗಳೂರು: ಅಗ್ನಿಶಾಮಕ ದಳದಿಂದ ಗಾಂಧಿ ಜಯಂತಿ ಆಚರಣೆ

Update: 2018-10-02 18:13 IST

ಮಂಗಳೂರು, ಅ.2: ನಗರದ ಕದ್ರಿ ಅಗ್ನಿಶಾಮಕ ದಳ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ಗಾಂಧಿ ಜಯಂತಿ ಪ್ರಯುಕ್ತ ಅಗ್ನಿಶಾಮಕ ದಳ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ಅಗ್ನಿಶಾಮಕ ದಳ ಕಚೇರಿಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿ ಶಾಮಕ ದಳ ಅಧಿಕಾರಿ ಮುಹಮ್ಮದ್ ಝುಲ್ಫಿಕರ್ ನವಾಝ್, ಅಗ್ನಿಶಾಮಕ ಕದ್ರಿ ಠಾಣೆಯ ಅಧಿಕಾರಿ ಸುನೀಲ್‌ಕುಮಾರ್, ಸಹಾಯಕ ಅಗ್ನಿಶಾಮಕ ಅಧಿಕಾರಿ ಸ್ಟೆಫನ್ ಡಿಸಿಲ್ವ, ಫೈರ್‌ಮನ್‌ಗಳಾದ ಮನೋಹರ್, ಲಕ್ಷ್ಮಣ ನಾಯಕ್, ಶೇಖರ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News