×
Ad

ತೊಕ್ಕೊಟ್ಟು: ರಾ.ಹೆ. 66ರ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

Update: 2018-10-02 18:37 IST

ಮಂಗಳೂರು, ಅ.2: ಪಂಪ್‌ವೆಲ್, ತೊಕ್ಕೊಟ್ಟು, ತಲಪಾಡಿ ಹೆದ್ದಾರಿಯ ಅವ್ಯವಸ್ಥೆಯ ವಿರುದ್ಧ ಮತ್ತು ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ, ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸಲು ಒತ್ತಾಯಿಸಿ, ತಲಪಾಡಿಯಲ್ಲಿ ಅಕ್ರಮ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಡಿವೈಎಫ್‌ಐ ವಲಯ ಸಮಿತಿಯ ನೇತೃತ್ವದಲ್ಲಿ ತೊಕ್ಕೊಟ್ಟಿನಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಿಪಿಎಂ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಕೃಷ್ಣಪ್ಪ ಸಾಲ್ಯಾನ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಜಿಲ್ಲಾ ಟ್ಯಾಕ್ಸಿಮೆನ್ಸ್ ಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಕುಂಪಲ, ಉಳ್ಳಾಲ ನಗರ ಸಭಾ ಸದ್ಯಸರಾದ ದಿನಕರ್ ಉಳ್ಳಾಲ್, ಮುಸ್ತಾಕ್ ಪಟ್ಲ, ಯು.ಎ. ಇಸ್ಮಾಯಿಲ್, ವೀರಮಾರುತಿ ವ್ಯಾಯಾಮ ಶಾಲೆಯ ಮಾಜಿ ಅಧ್ಯಕ್ಷ ರಮೇಶ್ ಮೆಂಡನ್, ಪದ್ಮಾವತಿ ಶೆಟ್ಟಿ, ಜೆಡಿಎಸ್ ಮುಖಂಡ ಝಾಕಿರ್ ಹುಸೈನ್, ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ, ನ್ಯಾಯವಾದಿ ರಾಮಚಂದ್ರ ಬಬ್ಬುಕಟ್ಟೆ, ಡಿವೈಎಫ್‌ಐ ಉಳ್ಳಾಲ ವಲಯ ಮುಖಂಡ ನಿತಿನ್ ಕುತ್ತಾರ್, ಪರಿಸರವಾದಿ ನವೀನ್ ನಾಯಕ್, ಡಿವೈಎಫ್‌ಐ ಉಳ್ಳಾಲ ವಲಯ ಮುಖಂಡ ಅಶ್ರಫ್ ತಲಪಾಡಿ ಮಾತನಾಡಿದರು.

ಹರೇಕಳ ಗ್ರಾಪಂ ಸದಸ್ಯರಾದ ಅಶ್ರಫ್, ಹನೀಫ್, ತಾಪಂ ಸದಸ್ಯೆ ಸುರೇಖಾ ಚಂದ್ರಹಾಸ್, ಉಳ್ಳಾಲ ನಗರ ಸಭೆಯ ಮಾಜಿ ಸದಸ್ಯರಾದ ರಝಿಯಾ ಇಬ್ರಾಹೀಂ, ಗೋಪಾಲ ಬಂಡಿಕೊಟ್ಯ, ಲತಾ ವಿಶ್ವನಾಥ್, ಸಿಪಿಎಂ ಉಳ್ಳಾಲ ವಲಯ ಅಧ್ಯಕ್ಷ ಜನಾರ್ದನ್ ಕುತ್ತಾರ್, ಟೀಮ್ ಮಂಗಳೂರು ಅಧ್ಯಕ್ಷ ಸ್ಟೀವನ್, ಉದ್ಯಮಿ ಖಲಂದರ್, ಸುನೀಲ್ ತೇವುಲ, ರಫೀಕ್ ಹರೇಕಳ, ಸಂತೋಷ್ ಪಿಲಾರ್, ಶಾಲಿ ಪಾವೂರು, ಅಸ್ಬಾಕ್ ಅಳೇಕಲ, ಬಾಬು ಪಿಲಾರ್, ಮಹಾಬಲ ದೆಪ್ಪಲಿಮಾರ್, ಅರುಣ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News