ಮಂಗಳೂರು: ದಫನ ಭೂಮಿಗಳ ಬಗ್ಗೆ ಮಾಹಿತಿ ನೀಡಲು ಸೂಚನೆ
Update: 2018-10-02 18:39 IST
ಮಂಗಳೂರು, ಅ.2: ರಾಜ್ಯ ವಕ್ಫ್ ಮಂಡಳಿಯ ಆಡಳಿತಾಧಿಕಾರಿ ಎ.ಬಿ.ಇಬ್ರಾಹೀಂರ ನಿರ್ದೇಶನದಂತೆ ದ.ಕ.ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿರುವ ಮಸೀದಿಗೆ ಸಂಬಂಧಪಟ್ಟ ಧಪನ ಭೂಮಿಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಹಾಗಾಗಿ ಮಸೀದಿಗೆ ಧಪನ ಭೂಮಿ ಇದೆಯೋ, ಇಲ್ಲವೋ, ದಫನ ಭೂಮಿ ಇದ್ದರೂ ಸೂಕ್ತ ದಾಖಲೆ ಪತ್ರಗಳಿಲ್ಲದ ಮಸೀದಿಗಳ ವಿವರಗಳನ್ನು ಹೆಸರು ಮತ್ತು ವಿಳಾಸ, ಗ್ರಾಮ ಮತ್ತು ಸರ್ವೆ ನಂಬ್ರ ಇತ್ಯಾದಿ ಮಾಹಿತಿಯನ್ನು ಜಿಲ್ಲಾ ವಕ್ಫ್ ಕಚೇರಿಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ವಕ್ಫ್ ಕಚೇರಿಯ ದೂ.ಸಂ: 0824-2420078ನ್ನು ಸಂಪರ್ಕಿಸಬಹುದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕಣಚೂರು ತಿಳಿಸಿದ್ದಾರೆ.