×
Ad

ಉಡುಪಿ: ಇಎಸ್‌ಐ ಸೌಲ್ಯಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

Update: 2018-10-02 21:20 IST

ಉಡುಪಿ, ಅ.2: ಇಎಸ್‌ಐ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಮಾಸ್ ಇಂಡಿಯಾ ಮತ್ತು ಮಾಹಿತಿ ಸೇವಾ ಸಮಿತಿಯ ವತಿಯಿಂದ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ಹಾಗೂ ಉಪವಾಸ ಸತ್ಯಾಗ್ರಹವನ್ನು ಮ್ಮಿಕೊಳ್ಳಲಾಗಿತ್ತು.

ಮಾಸ್ ಇಂಡಿಯಾ ಕರ್ನಾಟಕ ಅಧ್ಯಕ್ಷ ಜಿ.ಎ.ಕೋಟೆಯರ್ ಮಾತನಾಡಿ, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಇಎಸ್‌ಐ ಚಿಕಿತ್ಸೆಯನ್ನು ಆರಂಭಿಸಬೇಕು. ಇಎಸ್‌ಐ ಕಾರ್ಪೊರೇಶನ್ ಹಾಗೂ ಇಎಸ್‌ಐಎಸ್ ಒಟ್ಟು ಗೂಡಿಸಿ ಇಎಸ್‌ಐ ಕಾರ್ಪೊರೇಶನ್ ಆಗಿ ಮಾರ್ಪಡು ಮಾಡಬೇಕು. ಉಡುಪಿಯಲ್ಲಿ ಇಎಸ್‌ಐ ಪ್ರಾದೇಶಿಕ ಕಚೇರಿಯನ್ನು ಕೂಡಲೇ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಮಹಿಳಾ ಅಧ್ಯಕ್ಷೆ ವೀಣಾ ದೀಪಕ್, ಸಮಿತಿಯ ಮಣಿಪಾಲ ಯೂತ್ ಫ್ರಂಟ್‌ನ ಅವಿನಾಶ್, ಕಾಪು ಯೂತ್ ಫ್ರಂಟ್‌ನ ವಿಶ್ವನಾಥ್, ಮಹಿಳಾ ಅಧ್ಯಕ್ಷೆ ಐರಿನ್ ತಾವ್ರೊ, ಪಾದೂರು ಸಮಿತಿಯ ಅಧ್ಯಕ್ಷ ಹರಿಕೃಷ್ಣ ತಂತ್ರಿ, ಪ್ರವೀಣ್ ಕುಮಾರ್, ಸುನಂದ ಕೋಟೆಯಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News