×
Ad

ಮೂಡುಬಿದ್ರೆ: ಎಸ್.ವೈ.ಎಸ್ ಗುಂಡುಕಲ್ಲ್ ಬ್ರಾಂಚ್ ನೂತನ ಪದಾಧಿಕಾರಿಗಳ ಆಯ್ಕೆ

Update: 2018-10-02 21:25 IST

ಮೂಡುಬಿದ್ರೆ,ಅ.2: ಎಸ್.ವೈ.ಎಸ್ ಗುಂಡುಕಲ್ಲು ಬ್ರಾಂಚ್ ಇದರ ಮಹಾಸಭೆಯು ಇತ್ತೀಚೆಗೆ ಅಬ್ದುಲ್ ಸಲಾo ಮದನಿಯವರ ನಿವಾಸದಲ್ಲಿ ಪಿ.ಪಿ ಅಹ್ಮದ್ ಸಖಾಫಿಯವವರ ಅಧ್ಯಕ್ಷತೆಯಲ್ಲಿ ನಡೆಯಿತು.    

ಈ ವೇಳೆ 2018-19 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಸ‌ಅದಿ ಮಾರ್ನಾಡ್, ಅಧ್ಯಕ್ಷರಾಗಿ ಎಂ.ಎಚ್ ಉಸ್ಮಾನ್, ಉಪಾಧ್ಯಕ್ಷರಾಗಿ ಎಂ.ಎ ಅಬ್ದುಲ್ ಖಾದರ್ ಹಾಗೂ ಉಂಞಿ ಗುಡ್ಡೆಮನೆ ಯನ್ನು ನೇಮಕ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಮುಹಿಯದ್ದೀನ್ ಎಂ.ಎಚ್, ಜೊತೆ ಕಾರ್ಯದರ್ಶಿಯಾಗಿ ನಝೀರ್, ಕೋಶಾಧಿಕಾರಿಯಾಗಿ ಶಾಹುಲ್ ಹಮೀದ್. ಡಿ, ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಮುಹಿಯದ್ದೀನ್, ಇಸ್ಮಾಯಿಲ್ ಪೆಡ್ಡೇಲ್, ಮುಹಮ್ಮದ್ ಗುಡ್ಡೆಮನೆ, ಎಂ.ಬಿ ಅಬೂಬಕರ್, ಅಬ್ದುಲ್ ಹಮೀದ್ ಕೆ.ಎಚ್    ಅಬ್ದುಲ್ ಅಝೀಝ್ ಡಿ, ಅಬ್ದುಲ್ ಹಮೀದ್ ಎಚ್. ರನ್ನು ಆಯ್ಕೆ ಮಾಡಲಾಯಿತು.

ಎಸ್.ವೈ.ಎಸ್ ಮೂಡಬಿದ್ರೆ ಸೆಂಟರ್ ಕಾರ್ಯದರ್ಶಿ ಹನೀಫ್ ಅಲ್ ಮಫಾಝ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಅಬ್ದುಲ್ ಸಲಾಂ ಮದನಿ ಮಾರ್ನಾಡ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News