×
Ad

ಪತ್ರ ಬರೆದಿಟ್ಟು ಯುವತಿ ನಾಪತ್ತೆ

Update: 2018-10-02 21:47 IST

ಪಡುಬಿದ್ರಿ, ಅ.2: ಯುವತಿಯೊಬ್ಬಳು ಮನೆಯಲ್ಲಿ ಪತ್ರ ಬರೆದಿಟ್ಟು ನಾಪತ್ತೆ ಯಾಗಿರುವ ಘಟನೆ ಅ.1ರಂದು ಮಧ್ಯಾಹ್ನ ವೇಳೆ ಇನ್ನಾ ಗ್ರಾಮದ ಕಾಂಜರಕಟ್ಟೆ ಎಂಬಲ್ಲಿ ನಡೆದಿದೆ.

ಕಾಂಜರಕಟ್ಟೆಯ ಗಂಗಾಧರ ಎಂಬವರ ಮಗಳು ಜ್ಯೋತಿ(28) ಎಂಬವರು ಒಂದುವರೆ ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದು, ಅ.1ರಂದು ಬಟ್ಟೆ ಒಗೆಯಲು ಮನೆಯಿಂದ ಹೊರಗೆ ಹೋದವಳು ನಾಪತ್ತೆಯಾಗಿದ್ದಾರೆ. ಮನೆಯ ಮೇಜಿನ ಮೇಲೆ ಪತ್ತೆಯಾದ ಪತ್ರದಲ್ಲಿ, ‘ನನ್ನ ಮೇಲೆ ನಿಮಗೆ ಪ್ರೀತಿ ಕಡಿಮೆಯಾಗಿದೆ. ನಾನು ನಿಮಗೆ ದಿನ ದಿನಕ್ಕೆ ಭಾರ ಆಗುತ್ತಿದ್ದೇನೆ ಎಂದು ಅನಿಸುತ್ತಿದೆ. ನನ್ನ ಸಾಲವನ್ನು ತಾನೇ ತೀರಿಸುತ್ತೇನೆ’ ಎಂದು ಬರೆಯಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News