×
Ad

ಸಚಿವ ಡಿಕೆಶಿ ಕುಟುಂಬ ಕೊಲ್ಲೂರಿಗೆ ಭೇಟಿ

Update: 2018-10-02 21:49 IST

ಕೊಲ್ಲೂರು, ಅ.2: ರಾಜ್ಯ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಕುಟುಂಬ ಸಮೇತರಾಗಿ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ಮೂಕಾಂಬಿಕೆಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

 ಪತ್ನಿ ಉಷಾ ಶಿವಕುಮಾರ್ ಹಾಗೂ ಪುತ್ರಿ ಐಶ್ವರ್ಯ ಶಿವಕುಮಾರ್ ಅವರೊಂದಿಗೆ ಇಂದು ಬೆಳಗ್ಗೆ ಉಡುಪಿಗೆ ಆಗಮಿಸಿದ ಸಚಿವ ಶಿವಕುಮಾರ್ ನೇರವಾಗಿ ಕೊಲ್ಲೂರಿಗೆ ತೆರಳಿ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದರ ಲ್ಲದೇ, ದೇವಿಗೆ ವಿಶೇಷ ಪೂಜೆ ಸಲ್ಲಿಸಿತು.

ಇತ್ತೀಚೆಗೆ ಬೇರೆ ಬೇರೆ ವಿವಾದಗಳಲ್ಲಿ ಸಿಲುಕಿದ್ದು, ಸಿಬಿಐ, ಇಡಿ ತನಿಖೆಗೆ ಒಳಗಾಗಿರುವ ಶಿವಕುಮಾರ್, ಕುಟುಂಬ ಸಮೇತ ಬೈಂದೂರು ತಾಲೂಕಿ ನಲ್ಲಿರುವ ಕೊಲ್ಲೂರಿಗೆ ಭೇಟಿ ನೀಡಿರುವುದು ವಿಶೇಷ ಮಹತ್ವವನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News