×
Ad

ಸಮುದ್ರಕ್ಕಿಳಿದ ವಿಮಾನದಲ್ಲಿ ಪ್ರಯಾಣಿಕನ ಶವ ಪತ್ತೆ

Update: 2018-10-02 21:54 IST

ವೆಲಿಂಗ್ಟನ್, ಅ. 2: ಕಳೆದ ವಾರ ಪೆಸಿಫಿಕ್ ಸಾಗರದ ದ್ವೀಪವೊಂದರಲ್ಲಿ ರನ್‌ವೇ ತಪ್ಪಿಸಿ ಸಮೀಪದ ಸಾಗರದಲ್ಲಿ ಭೂಸ್ಪರ್ಶ ಮಾಡಿದ ಪ್ರಯಾಣಿಕ ವಿಮಾನವೊಂದರ ಒಳಗೆ ಪುರುಷ ಪ್ರಯಾಣಿಕರೊಬ್ಬರು ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೈಕ್ರೋನೇಶ್ಯದ ವೆನೊ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಏರ್ ನಿಯುಗಿನಿ ಬೋಯಿಂಗ್ 737-800 ವಿಮಾನವು ಭೂಸ್ಪರ್ಶ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಎಲ್ಲ 35 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ ಎಂಬುದಾಗಿ ಆರಂಭದಲ್ಲಿ ಏರ್‌ಲೈನ್ಸ್ ಹೇಳಿತ್ತು.

ಆದರೆ, ವಿಮಾನದ ಒಳಗೆ ಶೋಧ ನಡೆಸಿದ ಮುಳುಗುಗಾರರು ಹೆಣವೊಂದನ್ನು ಪತ್ತೆಹಚ್ಚಿದ್ದಾರೆ.

ಅಮೆರಿಕ ನೌಕಾಪಡೆಯ ಮುಳುಗುಗಾರರು ವಿಮಾನದ ಒಳಗಿನಿಂದ ಶವವನ್ನು ಹೊರಗೆ ತಂದಿದ್ದಾರೆ.

ಅಪಘಾತದಲ್ಲಿ ನಾಲ್ಕು ಮಂದಿ ಗಂಭೀರವಾಗಿ ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಮೈಕ್ರೋನೇಶ್ಯ ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News