ಕಾಪು : 150 ದೀಪಗಳನ್ನು ಬೆಳಗಿಸಿ ಗಾಂಧಿ ಜಯಂತಿ ಆಚರಣೆ

Update: 2018-10-02 16:58 GMT

ಕಾಪು, ಅ. 2 : ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ 150 ನೇ ಗಾಂಧಿ ಜಯಂತಿ ಆಚರಣೆಯನ್ನು ಗಾಂಧಿ ಭಾವಚಿತ್ರದ ಸುತ್ತ 150 ದೀಪಗಳನ್ನು ಬೆಳಗುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಶಾಲಾ ಆಡಳಿತ ಮಂಡಳಿಯ ಸಂಯೋಜಕ ದಿನೇಶ್ ಐತಾಳ್ ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ -ಭಜನೆ ನಡೆಯಿತು. ಇದೇ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ದೀಪ ಬೆಳಗಿಸಿ ಆಚರಿಸಲಾಯಿತು.

ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊಫೆಸರ್ ವಿ.ಕೆ ಉದ್ಯಾವರ್ ಮಾತನಾಡಿ, ಯುವ ಪೀಳಿಗೆ ಗಾಂಧೀಜಿಯವರ ವಿಚಾರಧಾರೆಗಳನ್ನು ಅನುಸರಿಸಿ, ಸಾರಿದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ದೇಶವನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಹುದು ಎಂದರು. 

ಕಾರ್ಯಕ್ರಮದಲ್ಲಿ ಶ್ವೇತಾ ಐತಾಳ್, ಪ್ರಾಂಶುಪಾಲ ವಿದ್ಯಾಧರ ಪುರಾಣಿಕ್, ಮುಖ್ಯೋಪಾಧ್ಯಾಯಿನಿ ರೋಹಿಣಿ ಸುವರ್ಣ, ಉಪನ್ಯಾಸಕಿ ನಫಿನ್ ಬಾನು, ಟ್ರಸ್ಟಿ ಸೋಮನಾಥ್ ಶೆಟ್ಟಿ,ಶ್ರೀಮತಿ ಗೌರಿ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News