ಭಾರತೀಯ ಬಳಕೆದಾರರ ಖಾತೆ ಮೇಲೆ ಹ್ಯಾಕಿಂಗ್‌ನ ಪರಿಣಾಮದ ಪರಿಷ್ಕೃತ ವರದಿ ನೀಡಿ: ಫೇಸ್‌ಬುಕ್‌ಗೆ ಐಟಿ ಸಚಿವಾಲಯ ಸೂಚನೆ

Update: 2018-10-02 17:50 GMT

ಹೊಸದಿಲ್ಲಿ, ಅ. 2: ಇತ್ತೀಚೆಗಿನ ಹ್ಯಾಕಿಂಗ್‌ನಿಂದ ಭಾರತೀಯ ಬಳಕೆದಾರರ ಮೇಲೆ ಆದ ಪರಿಣಾಮದ ಪರಿಷ್ಕೃತ ವರದಿ ನೀಡುವಂತೆ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಸೋಮವಾರ ಫೇಸ್‌ಬುಕ್‌ಗೆ ವಿನಂತಿಸಿದೆ. ಇತ್ತೀಚಿಗಿನ ಹ್ಯಾಕ್‌ನಿಂದ ಭಾರತೀಯ ಬಳಕೆದಾರರ ನಂಬರ್ ಮೇಲೆ ಆದ ಪರಿಣಾಮದ ಬಗ್ಗೆ ಸರಕಾರಕ್ಕೆ ಪರಿಷ್ಕೃತ ವರದಿ ನೀಡುವಂತೆ ವೌಖಿಕವಾಗಿ ಫೇಸ್ ಬುಕ್‌ಗೆ ತಿಳಿಸಲಾಗಿದೆ ಎಂದು ಮಾಹಿತಿ ತಂದ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಾವು ಈ ವಿಷಯದ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಎರಡು ದಿನಗಳ ಒಳಗೆ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಫೇಸ್‌ಬುಕ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಅನ್ನು ಸಂಪರ್ಕಿಸಿದರೆ, ಫೇಸ್‌ಬುಕ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಹ್ಯಾಕರ್‌ಗಳು ತಮ್ಮ ವ್ಯವಸ್ಥೆಯ ದುರ್ಬಲತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ 50 ದಶಲಕ್ಷ ಖಾತೆಗಳಿಗೆ ಹಾನಿ ಉಂಟಾಗಿದೆ ಎಂದು ಫೇಸ್‌ಬುಕ್ ಕಳೆದ ವಾರ ಹೇಳಿತ್ತು. ಆದರೆ, ಭಾರತದ ಮೇಲೆ ಆದ ನಿರ್ದಿಷ್ಟ ಪರಿಣಾವನ್ನು ಹೇಳಿರಲಿಲ್ಲ.

ಭಾರತದಲ್ಲಿ ಸುಮಾರು 200 ದಶಲಕ್ಷ ಫೇಸ್‌ಬುಕ್ ಬಳಕೆದಾರರು ಇದ್ದಾರೆ. ಜಗತ್ತಿನಲ್ಲೇ ಅತ್ಯಧಿಕ ಫೇಸ್‌ಬುಕ್ ಬಳಕೆದಾರರು ಇರುವುದು ಭಾರತದಲ್ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News