×
Ad

ರಾಜ್ಯಮಟ್ಟದ ಬೈಬಲ್ ರಸಪ್ರಶ್ನೆ ಸ್ಪರ್ಧೆ: ಬಾಗಲಕೋಟೆ ತಂಡಕ್ಕೆ ಪ್ರಶಸ್ತಿ

Update: 2018-10-03 19:29 IST

ಉಡುಪಿ, ಅ.3: ಉಡುಪಿ ಯುನೈಟೆಡ್ ಬಾಸೆಲ್ ಮಿಷನ್ ಜುಬುಲಿ ದೇವಾಲಯದ ಮಹಿಳಾ ಕೂಟದ ವತಿಯಿಂದ ರವಿವಾರ ದೇವಾಲಯದಲ್ಲಿ ಏರ್ಪಡಿಸಲಾದ 9ನೆ ವರ್ಷದ ರಾಜ್ಯಮಟ್ಟದ ಬೈಬಲ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಾಗಲಕೋಟೆಯ ಮುಷ್ಟಿಗಿರಿ ಗ್ರೋಸ್‌ಮೆನ್ ಮೆಮೋರಿಯಲ್ ಚರ್ಚ್ ಮೊದಲ ಬಹುಮಾನ ಗೆದ್ದುಕೊಂಡಿದೆ.

ಸಾಗರ ಬೇಲಿವೆರ್ಸ್ ಚರ್ಚ್ ದ್ವಿತೀಯ, ಭದ್ರಾವತಿ ಸಂತ ಫ್ರಾಂಸಿಸ್ ಚರ್ಚ್ ತೃತೀಯ, ಬೆಂಗಳೂರು ವೆಸ್ಲಿ ಸೆಂಟಿನರಿ ಕನ್ನಡ ಚರ್ಚ್ ನಾಲ್ಕನೆ ಹಾಗೂ ಉಡುಪಿ ಯು.ಬಿ.ಎಂ.ಜುಬಿಲಿ ಚರ್ಚ್ ಐದನೆ ಬಹುಮಾನವನ್ನು ಪಡೆದುಕೊಂಡವು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 27 ತಂಡಗಳು ಭಾಗವಹಿಸಿದ್ದವು.

ಈ ಸಂದರ್ಭದಲ್ಲಿ ರೆ.ವಿಜಯ ಕುಮಾರ್ ಮೂಡಲಗಿ, ರೆ.ಬೆನೆಡಿಟ್ ಅಂಚನ್, ಪ್ರಕಾಶ್ ಸೈಮನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News