×
Ad

ಪುರುಷರ ಭಾವನೆ, ಸಂವೇದನೆ ಗುರುತಿಸುವುದು ಅಗತ್ಯ: ಡಾ.ಬೆಜ್ಜಂಗಳ

Update: 2018-10-03 19:31 IST

ಉಡುಪಿ, ಅ.3: ಇಂದು ಸ್ತ್ರೀಯರ ಸಂವೇದನೆಗಳು ಕೃತಿಗಳಲ್ಲಿ, ವಿಮರ್ಶೆ ಗಳಲ್ಲಿ ಅನಾವರಣವಾಗುತ್ತಿರುವುದು ಸಾಮಾನ್ಯ. ಅದೇ ರೀತಿ ಪುರುಷರಿಗೂ ಭಾವನೆಗಳು, ಸಂವೇದನೆಗಳಿರುತ್ತವೆ. ಅವುಗಳನ್ನು ಗುರುತಿಸುವಂತಹ ಕೆಲಸ ಗಳು ನಡೆಯಬೇಕು ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಹೇಳಿದ್ದಾರೆ.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಆಧುನಿಕ ಸಾಹಿತ್ಯದಲ್ಲಿ ಸ್ತ್ರೀ ಪುರುಷ ಸಂವೇದನೆ ಎಂಬ ವಿಷಯದ ಕುರಿತ ಬಹುಭಾಷಾ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತ ನಾಡುತಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ ಸೋಫಿಯಾ ಡಾಯಸ್, ಕನ್ನಡ ವಿಭಾಗದ ಮುಖ್ಯಸ್ಥೆ ಹರಿಣಾಕ್ಷಿ ಎಂ.ಡಿ. ಉಪಸ್ಥಿತರಿದ್ದರು. ಕನ್ನಡ ವಿಭಾಗದ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಚಾರಸಂಕಿರಣ ಉದ್ಘಾಟನೆ: ಕಲ್ಯಾಣಪುರ ರೋಟರಿ ಕ್ಲಬ್‌ನ ಅಧ್ಯಕ್ಷ ಬ್ರಾಯನ್ ಡಿಸೋಜ ಗೋಷ್ಠಿಯನ್ನು ಉದ್ಘಾಟಿಸಿದರು. ಮಂಗಳೂರು ವಿವಿ ಎಸ್.ವಿ.ಪಿ. ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಬಿ.ಶಿವರಾಮ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ಅ.ವಂ.ಡಾ. ಲಾರೆನ್ಸ್ ಡಿಸೋಜ ವಹಿಸಿದ್ದರು.

ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ. ರತನ್ ಮೊಹಾಂತ, ಅರುಂದತಿ ರಾಯ್‌ರ ಉಪನ್ಯಾಸದಲ್ಲಿ ಲಿಂಗ ಸಂವೇದನೆ ಬಗ್ಗೆ ವಿಚಾರ ಮಂಡಿಸಿದರು. ಮಂಗಳೂರು ವಿವಿ ಕಾಲೇಜಿನ ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ.ನಾಗರತ್ನ ರಾವ್, ಪ್ರಭಾ ಖೇತಾನ್‌ರ ಅನ್ಯ ಸೇ ಅನನ್ಯಾ ತಕ್ ಎಂಬ ಪುಸ್ತಕದ ವಿಮರ್ಶೆಯನ್ನು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News