×
Ad

ಕ.ರಾ.ಮು.ವಿ.: ಕೋರ್ಸುಗಳ ಪ್ರವೇಶಕ್ಕೆ ಅ. 20 ಕೊನೆಯ ದಿನ

Update: 2018-10-03 20:39 IST

ಉಡುಪಿ, ಅ.3: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2018-19ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಕೋರ್ಸ್‌ಗಳಾದ ಬಿಎ/ಬಿಕಾಂ, ಎಂಎ/ಎಂಕಾಂ, ಬಿಲಿಬ್‌ಐಸ್ಸಿ,/ಎಂಲಿಬ್‌ಐಸ್ಸಿ ಮತ್ತು ಎಂಎಸ್ಸಿ (ಪರಿಸರ ವಿಜ್ಞಾನ) ವಿಷಯಗಳ ಪ್ರವೇಶಕ್ಕೆ ಅಂತಿಮ ದಿನವನ್ನು ವಿಸ್ತರಿಸಲಾಗಿದೆ. ಇದೇ ಅ.20, 200 ರೂ. ದಂಡ ಶುಲ್ಕದೊಂದಿಗೆ ಪ್ರವೇಶಕ್ಕೆ ಕೊನೆಯ ದಿನವಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸರಕಾರ ಮಿತಿಗೊಳಿಸಿರುವ ಅದಾಯದ ಮಿತಿಯೊಳಗಿದ್ದರೆ, ಅಂತಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಸುವ ಷರತ್ತಿಗೊಳಪಟ್ಟು ಶುಲ್ಕ ವಿನಾಯಿತಿಯಡಿ ಉಚಿತ ಪ್ರವೇಶ ಪಡೆಯಬಹುದು.

ಅರ್ಜಿಗಳನ್ನು ಕರಾಮುವಿ ಪ್ರಾದೇಶಿಕ ಕೇಂದ್ರ ಕಛೇರಿ, ಹಳೇ ಜಿಪಂ ಕಟ್ಟಡ, 2ನೇ ಮಹಡಿ, ಬನ್ನಂಜೆ, ಉಡುಪಿ ಇಲ್ಲಿ ಪಡೆದುಕೊಂಡು, ಅ.20ರೊಳಗೆ ಪ್ರಾದೇಶಿಕ ಕೇಂದ್ರ ಕಛೇರಿಗೆ ಸಲ್ಲಿಸಿ, ಸಿದ್ಧಪಾಗಳನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ವಿವಿರಗಳಿಗೆ ವಿವಿ ನಿಲಯದ ವೆಬ್‌ಸೈಟ್ www.ksoumysore.karnataka.gov.in   ಅಥವಾ ಉಡುಪಿ ಪ್ರಾದೇಶಿಕ ಕೇಂದ್ರದ ದೂರವಾಣಿ: 0820-2522247, 9972526647ನ್ನು ಸಂಪರ್ಕಿಸ ಬಹುದು ಎಂದು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಕೆ.ಪಿ. ಮಹಾಲಿಂಗ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News