×
Ad

ಬಂಟ್ವಾಳ ವಿಧಾನ ಸಭಾ ಕ್ಷೇತ್ರ: ಅ. 28ರಂದು ಸಂಗಬೆಟ್ಟು ತಾಪಂ ಉಪಚುನಾವಣೆ

Update: 2018-10-03 20:50 IST

ಬಂಟ್ವಾಳ, ಅ. 3: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಂಗಬೆಟ್ಟು ತಾಲೂಕು ಪಂಚಾಯತ್‍ನ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಅ. 28ರಂದು  ಉಪ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಟಕನೆ ತಿಳಿಸಿದೆ.

ಅ.13ರಂದು ಜಿಲ್ಲಾಧಿಕಾರಿ ಅವರು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅ.16 ರರಂದು ನಾಮಪತ್ರ ಸಲ್ಲಿಕೆ, ಅ.17ರಂದು ನಾಮಪತ್ರ ಪರಿಶೀಲನೆ, ಅ.20ರಂದು ಉಮೇದುವಾರಿಕೆ ಹಿಂತೆಗೆಯುವಿಕೆ, ಅ. 28ರಂದು ಬೆಳಿಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ. ಅ. 31ರಂದು ಬೆಳಿಗ್ಗೆ 8ಗಂಟೆಯಿಂದ ಮತದಾನ ಎಣಿಕಾ ಕಾರ್ಯವು ಬಂಟ್ವಾಳ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ವಿವಿಧ ಕಾರಣಗಳಿಂದ ತೆರವಾಗಿರುವ ಆರು ಜಿಲ್ಲಾ ಪಂಚಾಯತ್ ಹಾಗೂ ಮೂರು ತಾಲೂಕು ಪಂಚಾಯತ್‍ಗೆ ಈ ಉಪ ಚುನಾವಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಸಂಗಬೆಟ್ಟು ತಾಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದಿರುವ ಪ್ರಭಾಕರ ಪ್ರಭು ಅವರು, ಕಳೆದ ವಿಧಾ£ಸಭಾ ಚುನಾವಣೆಯ ಸಂದರ್ಭದಲ್ಲಿ ಸಂಗಬೆಟ್ಟು ತಾಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅ ಬಳಿಕ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News