×
Ad

ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಂತ್ರಿಕ ಉಪನ್ಯಾಸ, ಮಾದರಿ ಪ್ರದರ್ಶನ

Update: 2018-10-03 21:11 IST

ಮೂಡುಬಿದಿರೆ, ಅ. 3: ಇಲ್ಲಿನ  ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂಪರ್ಕ ಅಭಿಯಂತರ ವಿಭಾಗದ ವತಿಯಿಂದ " ಇನ್ ಸೈಟ್ ಆಫ್ ನೆಟ್ವಕ್ರ್ಸ್ ಮತ್ತು ಮೋಡೆಲ್ ಮೇಕಿಂಗ್ ಕಾಂಪಿಟೀಶನ್ ಟೆಕ್- ಆರ್ಟ್2ಕೆ18" ಎಂಬ ವಿಷಯದ ಬಗ್ಗೆ ತಾಂತ್ರಿಕ ಉಪನ್ಯಾಸ ಮತ್ತು ಮಾದರಿ ಪ್ರದರ್ಶನ ನಡೆಯಿತು.

ಅಕಮಾಯಿ ಟೆಕ್ನಾಲಾಜಿಸ್ ಪ್ರೈ ಲಿ ಬೆಂಗಳೂರು ಇಲ್ಲಿನ ಸೊಲ್ಯುಷನ್ಸ್ ಆರ್ಕಿಟೆಕ್ಟ್ ಆಗಿರುವ ಸಂಕಲ್ಪ. ಬಿ ಉಪನ್ಯಾಸವನ್ನು ನೀಡಿದರು. ಬೆಂಗಳೂರು ಬ್ರಿಟಿಷ್ ಟೆಲಿಕಾಂ ಇದರ ಉದ್ಯೋಗಿಯಾಗಿರುವ ನಿಖಿಲ್ ಶೆಟ್ಟಿ ಮೋಡೆಲ್ ಮೇಕಿಂಗ್ ಕಾಂಪಿಟೀಶನ್ ಟೆಕ್- ಆರ್ಟ್ 2ಕೆ18"ರ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಪ್ರಾಂಶುಪಾಲ ಡಾ. ಆರ್ ಜಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಪ್ರೀತಿ ವಂದಿಸಿದರು. ಸಂಭ್ರಮ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News