×
Ad

ಎರಡು ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕನಸು ಈಡೇರಿದೆ: ಯು.ಟಿ.ಖಾದರ್

Update: 2018-10-03 22:19 IST

ಕೊಣಾಜೆ, ಅ. 3: ನಡುಪದವು ಸುತ್ತಮುತ್ತಲಿನ ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಆಗಿ ರೂಪುಗೊಳ್ಳಲಿದೆ. ಪ್ರಮುಖವಾಗಿ ಈ ಭಾಗದ ಜನರ ಬಹು ದಿನಗಳ ಕನಸಾಗಿದ್ದ ನಡುಪದವು, ಲಾಡ, ಮೋಂಟುಗೋಳಿಯನ್ನು ಸಂಪರ್ಕಿಸುವ ರಸ್ತೆಯ ಇದೀಗ ನನಸಾಗುವ ಸಂದರ್ಭ ಬಂದಿದೆ ಎಂದು ಸಚಿವ ಯು.ಟಿ.ಖಾದರ್ ಅವರು ಹೇಳಿದರು.

ಅವರು ನಡುಪದವು ಕ್ರಾಸ್‍ನಿಂದ ಲಾಡ, ಪಟ್ಟೋರಿ ಮಾರ್ಗವಾಗಿ ಸಂಪರ್ಕದ 2.20 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ರಸ್ತೆ ಕಾಮಗಾರಿಗೆ ನಡುಪದವಿನಲ್ಲಿ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸಂಪರ್ಕ ರಸ್ತೆ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ನಡುಪದವು ಮೋಂಟುಗೋಳಿ ರಸ್ತೆಯ ಕಾಮಗಾರಿಯೂ ಶೀಘ್ರವಾಗಿ ನಡೆಯಲಿದೆ ಎಂದರು. 

ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ ಮಾತನಾಡಿ, ಸಚಿವರು ಈಗಾಗಲೇ ಸಾಕಷ್ಟು ಅನುದಾನ ನೀಡಿ ಗ್ರಾಮದ ಅಭಿವೃದ್ಧಿಯ ರೂವಾರಿಯಾಗಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಪದ್ಮಾವತಿ ಪೂಜಾರಿ, ಕೊಣಾಜೆ ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂರ್ ಕಾಜವ, ಕಾರ್ಯದರ್ಶಿ ಅಬ್ದುಲ್ ಜಲೀಲ್, ಬಾಳೆಪುಣಿ ಗ್ರಾಮ ಪಂ. ಅಧ್ಯಕ್ಷೆ ಲೀಲಾವತಿ,  ಪಂಚಾಯತ್ ಸದಸ್ಯರಾದ ನಾಸೀರ್ ನಡುಪದವು, ಸಿ.ಎಂ.ಶರೀಫ್ ಚೆಂಬೆತೋಟ. ಪಜೀರು ಗ್ರಾಮ ಪಂ. ಸದಸ್ಯ ಸೀತಾರಾಮ್ ಶೆಟ್ಟಿ, ಉಮ್ಮರ್ ಪಜೀರು, ಗುತ್ತಿಗೆದಾರ್ ಕೆ.ಕೆ.ನಾಸೀರ್, ಅಬ್ದುಲ್ ಖಾದರ್ ನಡುಪದವು, ನಂದರಾಜ್ ಶೆಟ್ಟಿ, ಅಚ್ಯುತ ಗಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಕೊಣಾಜೆ ಗ್ರಾಮ ಪಂ. ಸದಸ್ಯ ನಝರ್ ಷಾ ಪಟ್ಟೋರಿ ಸ್ವಾಗತಿಸಿದರು. ತಾಲೂಕು ಪಂ. ಮಾಜಿ ಸದಸ್ಯ ಮುಸ್ತಫಾ ಮಲಾರ್ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News