×
Ad

ಸಿಪಿಇಸಿಯಲ್ಲಿ ಸೌದಿ ಭಾಗೀದಾರಿಕೆ ಇಲ್ಲ: ಪಾಕಿಸ್ತಾನದಿಂದ ತಿಪ್ಪರಲಾಗ

Update: 2018-10-03 22:45 IST

ಇಸ್ಲಾಮಾಬಾದ್, ಅ. 3: 50 ಬಿಲಿಯ ಡಾಲರ್ ವೆಚ್ಚದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ಗೆ ಸೌದಿ ಅರೇಬಿಯ ಸೇರ್ಪಡೆಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಚೀನಾದ ಮಹತ್ವಾಕಾಂಕ್ಷೆಯ ‘ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್’ನ ಪ್ರಮುಖ ಯೋಜನೆಯಾಗಿರುವ ಸಿಪಿಇಸಿಯಲ್ಲಿ ಸೌದಿ ಅರೇಬಿಯ ಮೂರನೇ ಭಾಗೀದಾರನಾಗುವುದು ಎಂದು ಪಾಕಿಸ್ತಾನ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಸೌದಿ ಅರೇಬಿಯದ ಪ್ರಸ್ತಾಪಿತ ಹೂಡಿಕೆಗಳು ಪ್ರತ್ಯೇಕ ದ್ವಿಪಕ್ಷೀಯ ವ್ಯವಸ್ಥೆಗೆ ಒಳಪಡುವುದು ಎಂದು ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಖುಸ್ರೊ ಬಖ್ತಿಯಾರ್ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News