×
Ad

ಎಸ್ಕೆಎಸೆಸ್ಸೆಫ್ ಮೂಡುಬಿದಿರೆ: ಗಾಂಧಿ ಜಯಂತಿ ಪ್ರಯುಕ್ತ 'ವಿಖಾಯ ಡೇ'

Update: 2018-10-03 23:54 IST

ಮೂಡುಬಿದಿರೆ, ಅ. 3: ಎಸ್ಕೆಎಸೆಸ್ಸೆಫ್ ಮೂಡುಬಿದಿರೆ ವಲಯ ವತಿಯಿಂದ ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ 'ಕರುಣೆಯ ನೋಟ ಕೃಪೆಯ ಸಂದೇಶ' ಎಂಬ ದ್ಯೇಯ ವಾಕ್ಯದಡಿ ಗಾಂಧಿ ಜಯಂತಿಯ ಪ್ರಯುಕ್ತ 'ವಿಖಾಯ ಡೇ' ಆಚರಿಸಲಾಯಿತು.

ಮೂಡುಬಿದಿರೆ ಟೌನ್‌ ಮಸೀದಿಯ ಖತೀಬ್ ಮುಸ್ತಫಾ ಯಮಾನಿ ಉದ್ಘಾಟಿಸಿದರು. ಎಸ್ಕೆಎಸೆಸ್ಸೆಫ್ ಮೂಡುಬಿದಿರೆ ವಲಯ ಅಧ್ಯಕ್ಷ ಮಾಲಿಕ್ ಅಝೀಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಶಿಕಲಾ ಪರಿಸರ ಶುಚಿತ್ವದ ಕುರಿತು ಮಾತನಾಡಿ, ಕೈದೋಟ ನಿರ್ಮಾಣಕ್ಕೆ ಚಾಲನೆ ನೀಡಿದರು.

ನಂತರ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಾಗು  ಅಲಂಗಾರು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಲಾಯಿತು. ನಂತರ  ಸರ್ಕಾರಿ ಆರೋಗ್ಯ ಕೇಂದ್ರವನ್ನು ಸ್ವಚ್ಛಗೊಳಿಸಿದರು.

ಈ ಸಂದರ್ಭ ಎಸ್ಕೆಎಸೆಸ್ಸೆಫ್ ಮೂಡುಬಿದಿರೆ ವಿಖಾಯ ಕಾರ್ಯದರ್ಶಿ ಲಿಯಾಖತ್ ಆಲಿ, ಕೋಶಾಧಿಕಾರಿ ಯು.ಕೆ. ಮುಹಮ್ಮದ್ ಹಾಜಿ, ವಿಖಾಯ ಕನ್ವೀನರ್ ಝುಬೈರ್ ಕಲಾಯಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.  ಪ್ರ.ಕಾರ್ಯದರ್ಶಿ ಫಾರೂಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News