ಅಂದರ್ ಬಾಹರ್: ನಾಲ್ವರ ಬಂಧನ
Update: 2018-10-04 22:00 IST
ಉಡುಪಿ, ಅ.4: ಪುತ್ತೂರು ಗ್ರಾಮದ ಅಂಬಾಗಿಲು ವಾಸುಕಿನಗರ ಸಮೀಪದ ರಸ್ತೆಯಲ್ಲಿ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಅಡ್ಡೆಗೆ ಬುಧವಾರ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ನಗದು ಹಣವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಅಂಬಾಗಿಲು ಶ್ಯಾಮ್ ಸರ್ಕಲ್ ಬಳಿ ನಿವಾಸಿ ಪ್ರವೀಣ್ (36), ಕಿನ್ನಿಮೂಲ್ಕಿ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ಪ್ರಶಾಂತ್ (32), ಕಡೆಕಾರು ಬಬ್ಬುಸ್ವಾಮಿ ದೇವಸ್ಥಾನ ಸಮೀಪದ ನಿವಾಸಿ ಸದಾಶಿವ (34) ಕರ್ನ್ನಪಾಡಿ ಲೇಬರ್ ಕಾಲೋನಿ ನಿವಾಸಿ ರಮೇಶ್ (34) ಬಂಧಿತರು.
ಆರೋಪಿಗಳು ಬೀಗ ಹಾಕಿದ ಮನೆಯ ಮುಂಭಾಗದ ಬಾವಿಕಟ್ಟೆಯ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಅಕ್ರಮವಾಗಿ ಕೃತ್ಯದಲ್ಲಿ ನಿರಂತರಾಗಿದ್ದ ವೇಳೆ ದಾಳಿ ಮಾಡಲಾಗಿದೆ. ಆರೋಪಿಗಳಿಂದ 6120 ರೂ. ನಗದು ಸಹಿತ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.