×
Ad

ಕೊಡ್ಲಾಡಿ: ದೇವಸ್ಥಾನದಲ್ಲಿ ಕಳ್ಳತನ

Update: 2018-10-04 22:02 IST

ಶಂಕರನಾರಾಯಣ, ಅ.4: ನಿನ್ನೆ ರಾತ್ರಿ 11:40ರಿಂದ ಇಂದು ಬೆಳಗ್ಗೆ 7:00 ಗಂಟೆ ನಡುವಿನ ಅವಧಿಯಲ್ಲಿ ಕೊಡ್ಲಾಡಿ ಗ್ರಾಮದ ನೀರಾವಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯದ್ವಾರದ ಬೀಗ ಮುರಿದ  ಕಳ್ಳರು ದೇವಸ್ಥಾನದ ಗರ್ಭಗುಡಿಯಲ್ಲಿದ್ದ ಬೆಳ್ಳಿಯ ಮುಖವಾಡ ಹಾಗೂ ಚಿನ್ನದ ತಾಳಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಕಳವಾದ ಸೊತ್ತುಗಳ ಮೌಲ್ಯ 24,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News