ಬೈಂದೂರು: ಕಾರು ಡಿಕ್ಕಿ, ವ್ಯಕ್ತಿ ಸಾವು
Update: 2018-10-04 22:03 IST
ಬೈಂದೂರು, ಅ.4: ಬಸ್ಸಿಗಾಗಿ ಕಾಯುತಿದ್ದ ವ್ಯಕ್ತಿಯೊಬ್ಬರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆತ ಮೃತಪಟ್ಟ ಘಟನೆ ಕಂಬದಕೋಣೆ ಗ್ರಾಮದ ಕಂಬದಕೋಣೆ ಜಂಕ್ಷನ್ ಬಳಿ ನಡೆದಿದೆ.
ಮೃತನ ಅಂಗಿ ಕಿಸೆಯಲ್ಲಿದ್ದ ಮೊಬೈಲ್ ಹಾಗೂ ಆಧಾರ್ ಕಾರ್ಡ್‌ನ ನೆರವಿನಿಂದ ಆತನನ್ನು ಗದಗ ಜಿಲ್ಲೆ ಇಟಗಿ ತಾಲೂಕಿನ ಚಂದ್ರಶೇಖರ ಗಿರಿಯಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.