ಕ್ಯಾಂಪ್ಕೊ ವತಿಯಿಂದ ರವಿರಾಜ್ ಹೆಗ್ಡೆಗೆ ಸನ್ಮಾನ
Update: 2018-10-04 22:18 IST
ಮಂಗಳೂರು, ಅ.4:ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರನ್ನು ನಗರದ ಸಂಘನಿಕೇತನದಲ್ಲಿ ಇತ್ತೀಚೆಗೆ ಜರುಗಿದ ಕ್ಯಾಂಪ್ಕೊದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್)ನ ನಿರ್ದೇಶಕರೂ ಆಗಿ ಕಾರ್ಯನಿರ್ವಹಿಸುತ್ತಿರುವ ರವಿರಾಜ್ ಹೆಗ್ಡೆಯವರು ದ.ಕ., ಉಡುಪಿ ಜಿಲ್ಲೆಗಳ ಕ್ಷೀರಕ್ರಾಂತಿಗೆ ಅವಿರತ ಪ್ರಯತ್ನಿಸಿ ಸಹಕಾರ ತತ್ವಗಳ ಮೂಲಕ ಪ್ರಸಕ್ತ ದ.ಕ. ಒಕ್ಕೂಟವನ್ನು ರಾಜ್ಯದ ಪ್ರತಿಷ್ಠಿತ ಒಕ್ಕೂಟವಾಗುವಂತೆ ಮಾಡಿದ್ದಾರೆ. ಕಳೆದ ಸಾಲಿನಲ್ಲಿ ನ್ಯಾಷನಲ್ ಡೈರಿ ಎಕ್ಸಲೆನ್ಸ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತಕ್ಕೂ ಪಾತ್ರರಾಗಿದ್ದಾರೆ ಎಂದರು.