×
Ad

ಉಳ್ಳಾಲ: ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ

Update: 2018-10-04 22:20 IST

ಮಂಗಳೂರು, ಅ.4: ಉಳ್ಳಾಲ ವಲಯ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸಂಘಟನೆಯ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಪವಿತ್ರ ಉಮ್ರಾ ಯಾತ್ರಿಕ ಹಿರಿಯ ಸಮಸ್ತ ಹಿತೈಷಿಗಳನ್ನು ಬೀಳ್ಕೊಡಲಾಯಿತು.

ಶಂಶುಲ್ ಉಲಮಾ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಯು.ಟಿ.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಸೈಯದ್ ಮದನಿ ಹಿಫ್ಲುಲು ಕುರ್‌ಆನ್ ಕಾಲೇಜಿನ ಪ್ರಾಂಶುಪಾಲ ಝೈನ್ ಸಖಾಫಿ ಮಾತನಾಡಿದರು.

ಈ ಸಂದರ್ಭ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಹಸನಬ್ಬ ಮಿಲ್ಲತ್ ನಗರ, ಇಬ್ರಾಹಿಂ ಕೌಸರ್ ಅಝಾದ್ ನಗರ, ಪೊಡಿಮೋನು ಹೊಸ ಕರಿಯ ಅವರನ್ನು ಉದ್ಯಮಿ ಬಾವ ಅಹ್ಮದ್ ಹಾಗೂ ಎಸ್ಕೆ ಎಸ್ಸೆಸ್ಸೆಫ್ ಉಳ್ಳಾಲ ವಲಯ ಅಧ್ಯಕ್ಷ ಬಶೀರ್ ಇಸ್ಮಾಯಿಲ್ ಬೀಳ್ಕೊಟ್ಟರು.

ಶಂಶುಲ್ ಉಲಮಾ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಕೆ.ಎಸ್.ಮೊಯ್ದಿನ್, ಟ್ರಸ್ಟಿ ಬಶೀರ್ ಗುಂಡಿಹಿತ್ಲು, ಸೈಯದ್ ಮದನಿ ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಪುತ್ತುಮೋನು ಹುಸೈನ್, ರಝಾಕ್ ಹರೇಕಳ, ನಝೀರ್ ಬಾರ್ಲಿ, ಅಶ್ರಫ್ ಮೇಲಂಗಡಿ, ಇಸ್ಮಾಯೀಲ್ ನುಸ್ರತ್, ಇಕ್ಬಾಲ್ ಬಡ್ಕೋಡಿ, ಹನೀಫ್ ಬಸ್ತಿಪಡ್ಪು, ಹನೀಫ್ ಅಳೇಕಲ, ರಹ್ಮತ್ತುಲ್ಲಾ, ಇಸ್ಮಾಯಿಲ್ ಮೇಲಂಗಡಿ, ಮುನವ್ವರ್ ಬಾವ, ಮುಹಮ್ಮದ್ ಪಾಂಡೇಲ್ ಪಕ್ಕ ಮತ್ತಿತರರು ಉಪಸ್ಥಿತರಿದ್ದರು. 

ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಹೈದರ್ ಉಳ್ಳಾಲಬೈಲ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News