×
Ad

ಪುತ್ತೂರು: ನಿಸ್ಸಾಯಕ ಮಹಿಳೆಗೆ ನೆರವಾದ ಎಸ್‍ಡಿಪಿಐ ಕಾರ್ಯಕರ್ತರು

Update: 2018-10-04 22:23 IST

ಪುತ್ತೂರು, ಅ. 4: ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಲು ಹಣದ ಅಡಚಣೆಯಿಂದ ತೊಂದರೆಗೆ ಒಳಗಾಗಿದ್ದ ಅನಾರೋಗ್ಯ ಪೀಡಿತ ಬಡ ಮಹಿಳೆಯೊಬ್ಬರಿಗೆ ಪುತ್ತೂರು ತಾಲೂಕಿನ ಕುರಿಯ ಶಾಖೆಯ ಎಸ್‍ಡಿಪಿಐ  ಕಾರ್ಯಕರ್ತರು ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಪುತ್ತೂರು ತಾಲೂಕಿನ ಕುರಿಯ ಎಂಬಲ್ಲಿನ ನಿವಾಸಿ ಪಾರ್ವತಿ ಎಂಬ ಮಹಿಳೆ ಅನಾರೋಗ್ಯ ಪೀಡಿತರಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಮನೆಗೆ ಹಿಂದಿರುಗಳು ಹಣವಿಲ್ಲದೆ ನಿಸ್ಸಾಯಕರಾಗಿದ್ದರು. ಇದನ್ನು ಅರಿತ ಎಸ್‍ಡಿಪಿಐ ಕುರಿಯ ಶಾಖೆ ಹಾಗೂ ಆರ್ಯಾಪು ಗ್ರಾಮ ಸಮಿತಿಯ ಸದಸ್ಯರು ಪಕ್ಷದ ಅಂಬುಲೆನ್ಸ್ ಮೂಲಕ ಉಚಿತವಾಗಿ ಕುರಿಯದ ಮನೆಗೆ ತಲುಪಿಸಿದರು. 

ಈ ಸಂದರ್ಭದಲ್ಲಿ ಎಸ್‍ಡಿಪಿಐ ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಕುರಿಯ ಶಾಖೆಯ ಅಧ್ಯಕ್ಷ ಆಸಿಫ್ ಕುರಿಯ, ಉಪಾಧ್ಯಕ್ಷ ಅಶ್ರಫ್ ಕುರಿಯ, ಕಾರ್ಯದರ್ಶಿ ಸಮೀರ್, ಸದಸ್ಯರಾದ ನಾಸಿರ್ ಕಲ್ಲರ್ಪೆ, ರಫೀಕ್ ಎಚ್. ಆಶಿಫ್, ಇರ್ಶಾದ್ ಮುಂಡೂರು ಉಪಸ್ಥಿತರಿದ್ದರು. 
ಅಂಬುಲೆನ್ಸ್ ಚಾಲಕರಾದ ನಿಝಾಮ್ ಅಡ್ಡೂರು ಮತ್ತು ಝೈನುದ್ದೀನ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News