×
Ad

ಕಣಚೂರಿನಲ್ಲಿ 'ಶೋಧ–2018’ ಅಂತರ್ ಕಾಲೇಜ್ ಸ್ಪರ್ಧೆಯ ಉದ್ಘಾಟನೆ

Update: 2018-10-04 22:33 IST

ಕೊಣಾಜೆ, ಅ. 4: ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಸಯನ್ಸ್ ಕಾಲೇಜಿನ ವತಿಯಿಂದ ನಡೆದ ಶೋಧ 2ಏ18 ಅಂತರ್ ಕಾಲೇಜ್ ಸ್ಪರ್ಧೆಯ ಉದ್ಘಾಟನೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಕೆ ಸರೋಜಿನಿಯವರು,  “ಶಿಕ್ಷಣ ಎನ್ನುವುದು ಬದಲಾವಣೆಯನ್ನು ತರುವಂತದ್ದು ಅದೊಂದು ಶಕ್ತಿ. ಇದನ್ನು ಅಬಿವ್ಯಕ್ತಿಪಡಿಸುವ ನೈಪುಣ್ಯತೆ ನಮ್ಮಲ್ಲಿ ಇದ್ದಾಗ, ನಾವು ಸಾಧನೆಯ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ ಮೋನು ಮಾತನಾಡಿ, ವಿದ್ಯಾರ್ಥಿನಿಯರು ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿ, ಕಲಿತು ಸಾಧನೆ ಮಾಡಿದಾಗ ಈ ಸಮಾಜ ನಿಮ್ಮನ್ನು ಗುರುತಿಸಿ, ಅಭಿನಂದಿಸುತ್ತದೆ. ನಮಗೆ ಸಿಗದ ಅವಕಾಶಗಳು ನಿಮಗೆ ಸಿಕ್ಕಿದೆ. ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿ ಎಂದು ಹೇಳಿದರು. 

ಕಾಲೇಜಿನ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹಮದ್ ಯು.ಟಿ.ರವರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ, ಕಣಚೂರು ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆಯಾದ ವಿನೀತಾ ಮಥಾಯಸ್, ಪ್ರಿ ಪ್ರೈಮರಿಯ ಪ್ರಾಂಶುಪಾಲೆ ಆನಂದಿ, ಪ್ರಿಸ್ಕೂಲ್‍ನ ಮುಖ್ಯೋಪಾದ್ಯಾಯಿನಿ ಲಿನೇಟ್ ಡಿ.ಸೋಜ, ಕಾರ್ಯಕ್ರಮದ ಸಂಯೋಜಕರುಗಳಾದ ವಾಣಿಜ್ಯ ವಿಭಾಗದ ಉಪನ್ಯಾಸಕರುಗಳಾದ ಅವಿನಾಶ್ ಎಸ್.ಎಂ., ಆ್ಯಂಜಲಿನ್ ಸುಪ್ರಿಯಾ ಡಿಸೋಜ, ಕುಮಾರಿ ಜಯಶ್ರೀ, ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿಯಾದ ಮುಬೀನ್ ತಾಜ್ ಕಾರ್ಯಕ್ರಮವನ್ನು ನಿರೂಪಿಸಿದರು, 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News