×
Ad

ಮಾಡೂರು ಗಲ್ಫ್ ಫ್ರೆಂಡ್ಸ್ ವೆಲ್ಪೇರ್ ಅಸೋಸಿಯೇಷನ್ ವತಿಯಿಂದ ಕೊಡಗಿನ ನಿರಾಶ್ರಿತರಿಗೆ ಸಹಾಯ

Update: 2018-10-04 23:08 IST

ಮಂಗಳೂರು, ಅ. 4: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಮೀಮ್ ನಗರ ಪರಿಸರದಲ್ಲಿ ಮಾಡೂರು ಗಲ್ಫ್ ಫ್ರೆಂಡ್ಸ್ ವೆಲ್ಫೇರ್ ಅಸೋಸಿಯೇಷನ್  ವತಿಯಿಂದ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ನಿರಾಶ್ರಿತರಿಗೆ ಸಹಾಯ ಹಸ್ತವನ್ನು ನೀಡಲಾಯಿತು. 

ವೆಲ್ಫೇರ್ ಅಸೋಸಿಯೇಷನ್ ಸದ್ರಿ ಸ್ಥಳವನ್ನು ವೀಕ್ಷಿಸಿ, ಅಲ್ಲಿನ ನಿರಾಶ್ರಿತರನ್ನು ಮುಖತಃ ಭೇಟಿಯಾಗಿ ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರ  (ಕೊಡಗು ಜಿಲ್ಲೆ) ಇದರ ಮುಖ್ಯಾಧಿಕಾರಿ ಸುರಯ್ಯ ಅಬ್ರಾರ್ ಸಹಕಾರದೊಂದಿಗೆ ಅರ್ಹ ಫಲಾನುಭವಿಗಳಿಗೆ 65,000 ರೂ. ಚೆಕ್ ವಿತರಿಸಲಾಯಿತು.

ಈ ವೇಳೆ ಅಧ್ಯಕ್ಷರಾದ ಎಂ.ಎ ಶಾಕೀರ್, ಪ್ರಧಾನ ಕಾರ್ಯದರ್ಶಿ ರಫೀಕ್ ಇಸ್ಮಾಯಿಲ್, ಕೋಶಾಧಿಕಾರಿ ಮಜಿದ್ ಹಸನ್ ಮಾಡೂರು, ರಫೀಕ್ ಮುಂಬೈ, ಆಸಿಫ್ ಕತಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News