×
Ad

ತಲಪಾಡಿ: ಮನೆಗೆ ಸಿಡಿದು ಬಡಿದು ಹಾನಿ

Update: 2018-10-04 23:18 IST

ಉಳ್ಳಾಲ, ಅ. 4: ಗುರುವಾರದಂದು ಸಂಜೆ ಸುರಿದ ಗುಡುಗು ಸಹಿತ ಮಳೆಗೆ ತಲಪಾಡಿ ನಾರ್ಲ ಬಳಿಯ ಹೇಮಾವತಿ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಗೆ ಹಾನಿ ಸಂಭವಿಸಿದೆ. 

ಗುರುವಾರ ಸಂಜೆ ಮನೆಗೆ ಸಿಡಿಲು ಅಪ್ಪಳಿಸಿದ್ದು, ಈ ಸಂದರ್ಭದಲ್ಲಿ ಮನೆಯೊಳಗಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಎಲೆಕ್ಟ್ರಾನಿಕ್ಸ್ ವಸ್ತುಗಳು ಸುಟ್ಟು ಹೋಗಿವೆ. ಘಟನೆಯಿಂದ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. 

ಅಲ್ಲದೆ ಗುರುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ತಲಪಾಡಿ ಶಾಲೆ ಬಳಿಯಲ್ಲಿ ತೆಂಗಿನಮರವೊಂದು ಉರುಳಿ ಬಿದ್ದು ಮನೆಯೊಂದರ ಆವರಣಗೋಡೆಗೆ ಹಾನಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News