ಮಂಗಳೂರು: ಎಸಿಪಿ ಭಾಸ್ಕರ ಒಕ್ಕಲಿಗ ಅಧಿಕಾರ ಸ್ವೀಕಾರ
Update: 2018-10-04 23:23 IST
ಮಂಗಳೂರು, ಅ. 4: ಮಂಗಳೂರು ನಗರ ಪೊಲೀಸ್ ಕಮಿಷನರೆಟ್‌ನ ಕೇಂದ್ರ ಉಪ ವಿಭಾಗದ ಎಸಿಪಿ ಆಗಿ ಭಾಸ್ಕರ ಒಕ್ಕಲಿಗ ಗುರುವಾರ ಅಧಿಕಾರ ಸ್ವೀಕರಿಸಿದರು.
ಅವರು ಈ ಹಿಂದೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಜಾಗೃತ ದಳದ ಡಿವೈಎಸ್ಪಿ ಹುದ್ದೆಯಲ್ಲಿದ್ದರು.
ಇದುವರೆಗೆ ಮಂಗಳೂರಿನ ಕೇಂದ್ರ ಉಪ ವಿಭಾಗದ ಎಸಿಪಿ ಆಗಿದ್ದ ಉದಯ ನಾಯಕ್ ಅವರನ್ನು ಭಡ್ತಿ ನೀಡಿ ಗುಪ್ತಚರ ವಿಭಾಗದ (ಮಂಗಳೂರು) ಎಸ್ಪಿ ಆಗಿ ನೇಮಕ ಮಾಡಲಾಗಿದೆ.
ಕಂಕನಾಡಿ ಪಿಐ ಅಶೋಕ್: ಕಂಕನಾಡಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಅಶೋಕ್ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಹಿಂದೆ ಕೊಣಾಜೆ ಠಾಣೆಯಲ್ಲಿದ್ದರು.