×
Ad

ದಕ್ಷಿಣ ವಲಯ ಸಾಂಸ್ಕೃತಿಕ ಸ್ಪರ್ಧೆ: ಆಳ್ವಾಸ್‍ನಿಂದ 27 ಮಂದಿ ವಿದ್ಯಾರ್ಥಿಗಳು ಆಯ್ಕೆ

Update: 2018-10-05 19:01 IST

ಮೂಡುಬಿದಿರೆ, ಅ. 5: ಮಂಗಳೂರು ವಿ.ವಿ ವ್ಯಾಪ್ತಿಯ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯ ಲಲಿತ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ರಂಗೋವತ್ಸವದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಐದು ವಿಭಾಗಗಳಲ್ಲಿ ಈಗಾಗಲೇ ಸಮಗ್ರ ಪ್ರಶಸ್ತಿ ಪಡೆದಿದ್ದು, ಅ. 7 ರಂದು 11ರವರೆಗೆ ತಿರುಪತಿಯ ಶ್ರೀಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆಯುವ ದಕ್ಷಿಣ ವಲಯ ಅಂತರ್ ವಿವಿ ಸಾಂಸ್ಕೃತಿಕ ಉತ್ಸವಕ್ಕೆ ಸಂಸ್ಥೆಯ 27 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಮಂಗಳೂರು ವಿ.ವಿ ಮಟ್ಟದ ಸಾಂಸ್ಕøತಿಕ ಉತ್ಸವದಲ್ಲಿ ಆಳ್ವಾಸ್ ಸಂಸ್ಥೆಯು ಕಳೆದ 14 ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ಪಡೆಯುತ್ತಿದ್ದು, 7 ಬಾರಿ ದಕ್ಷಿಣ ವಲಯ ಹಾಗೂ 4 ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಈ ಬಾರಿ ಏಕಾಂಕ ನಾಟಕ, ಕಿರು ಪ್ರಹಸನ, ಶಾಸ್ತ್ರೀಯ ಸಂಗೀತ, ಕೊಲಾಜ್, ಅವೆಮಣ್ಣಿನ ಮಾದರಿ, ಚಿತ್ರಕಲೆ, ವ್ಯಂಗ್ಯಚಿತ್ರ ಹಾಗೂ ಜಾನಪದ ಸಮೂಹ ನೃತ್ಯ ವಿಭಾಗಗಳಲ್ಲಿ ಆಳ್ವಾಸ್ 27 ಮಂದಿ ವಿದ್ಯಾರ್ಥಿಗಳು ಮಂಗಳೂರು ವಿ.ವಿಯನ್ನು ಪ್ರತಿನಿಧಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ 38 ವಿದ್ಯಾರ್ಥಿಗಳಲ್ಲಿ ಆಳ್ವಾಸ್ 27 ಮಂದಿ ಆಳ್ವಾಸ್‍ನ ವಿದ್ಯಾರ್ಥಿಗಳಿರುವುದು ದಾಖಲೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News